ಸರಕಾರದ ಹಣ ದುರುಪಯೋಗ,ಆರ್‍ಟಿಐ ಕಾರ್ಯಕರ್ತ ಭೀಮಪ್ಪ ತಿಳಿಸಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

4
ಬೆಳಗಾವಿ,ಫೆ.22- ಕರ್ನಾಟಕ ಸರಕಾರ 2011ರಿಂದ 2016ರವರೆಗೆ ಐದು ವರ್ಷ ಅವಧಿಯಲ್ಲಿ ರಾಜ್ಯದ 1169 ಸಂಸ್ಥೆಗಳಿಗೆ ಸುಮಾರು 60.51 ಕೋಟಿ ಹಣ ಬಿಡುಗಡೆ ಮಾಡಿದ್ದು ಅಷ್ಟು ಹಣ ದುರುಪಯೋಗವಾಗಿದೆ ಎಂದು ಆರ್‍ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.ಇಂದು ಸುದ್ದಿಗೊಷ್ಠಿಯಲ್ಲಿ ಅಂಕಿ ಸಂಖ್ಯೆ ಸಹಿತ ಮಾತನಾಡಿ 33.33 ಕೋಟಿ ಬರಿ ಬೆಂಗಳೂರು ನಗರಕ್ಕೆ ಮಾತ್ರ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮೂಲಕ ಕೊಡಲಾಗಿದ್ದು, ಇಡೀ ರಾಜ್ಯ ಅದರಲ್ಲೂ ಉತ್ತರ ಕರ್ನಾಟಕಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಹಣ ಯಾವ ಲೆಕ್ಕಕ್ಕೂ ಕೊಡಲಾಗಿಲ್ಲ ಎಂದು ಗಡಾದ ತಿಳಿಸಿದರು.

ಎಷ್ಟು ಸಂಘ ಸಂಸ್ಥೆಗಳು ಸರಕಾರದಿಂದ ಹಣ ಪಡೆದು ಕಾರ್ಯಕ್ರಮ ಮಾಡಿವೆ ಎಂಬುವುದರ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು ಎಂದು  ಒತ್ತಾಯಿಸಿದರು. ರಾಜಕೀಯ ಪ್ರಭಾವ ಮತ್ತು ಸಚಿವ ಶಾಸಕರು ಶಿಫಾರಸ್ಸು ಪತ್ರಗಳ ಆಧಾರದಲ್ಲಿ ಸಾಕಷ್ಟು ಬೇಕಾಬಿಟ್ಟಿ ಹಣ ಬಿಡುಗಡೆಯಾಗಿದೆ ಎಂದರು.ಬೆಂಗಳೂರು ನಗರದಲ್ಲಿ ಮಾತ್ರ 402 ಸಂಸ್ಥೆಗಳಿಗೆ 33.33 ಕೋಟಿ ಹಣ ಕೊಡುವುದೆಂದರೆ ಏನರ್ಥ. ಹೆಚ್ಚು ತೆರಿಗೆ ಕೊಡುವ ಬೆಳಗಾವಿ ಜಿಲ್ಲೆ ಮತ್ತು ವಿವಿಧ ಜಿಲ್ಲೆಗಳ ಕಥೆ ಏನು ಎಂದು ಗಡಾದ ಪ್ರಶ್ನಿಸಿದರು.  ನಾಲ್ವತ್ತು ಲಕ್ಷಕ್ಕಿಂತ ಹೆಚ್ಚು ಹಣ ಕಾರ್ಯಕ್ರಮಗಳನ್ನು ನಡೆಸಲು ಪಡೆದ ಸಂಸ್ಥೆಗಳ ಲಿಸ್ಟ ಮಾಡಿಕೊಳ್ಖಲಾಗಿದ್ದು, ತನಿಖೆಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದರು.  ಜಿಲ್ಲೆಗೆ ಕನ್ನಡ ಮತ್ತು ಸಾಂಸ್ಕ್ರತಿಕ ಬೆಳವಣಿಗೆ ಸಂಬಂಧ ಹೆಚ್ಚಿನ ಹಣ ಸರಕಾರ ಬಿಡುಗಡೆ ಮಾಡದಿರುವುದು ಗಮನಕ್ಕೆ ಬಂದಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin