ಖರ್ಚಿಗೆ ಹಣ ಕೊಡದ ಮೇಲೆ ಮಾರಣಾಂತಿಕ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪೇಟೆ, ಫೆ.23- ತನ್ನ ಪ್ರೋಷಕರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧ ಯುವಕನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ.ಗಂಜಿಗೆರೆ ಗ್ರಾಮದ ಪುಟ್ಟಸ್ವಾಮಯ್ಯ ಎಂಬುವರ ಪುತ್ರ ಪುನೀತ್‍ಕುಮಾರ್ (22) ಬಂಧಿತ ಆರೋಪಿ.ಫೆ.20ರಂದು ಪುನಿತ್‍ಕುಮಾರ್ ತನ್ನ ಪ್ರೋಷಕರ ಬಳಿ ಖರ್ಚಿಗಾಗಿ ಹಣ ಕೇಳಿದ್ದು, ಇದಕ್ಕೆ ನಿರಾಕರಿಸಿದ ಪ್ರೋಷಕರ ಮೇಲೆ ಪುನೀತ್ ಕ್ಯಾತೆ ತೆಗೆದಿದ್ದು, ಮಚ್ಚು ಮತ್ತು ಕಟ್ಟಿಗೆಯಿಂದ ಮನಬಂದಂತೆ ಥಳಿಸಿ ಪರಾರಿಯಾಗಿದ್ದಾನೆ.ಅಲ್ಲದೆ, ಮಾರನೆ ದಿನವೂ ಕೂಡ ಪುನೀತ್ ಹಲ್ಲೆಗೆ ಯತ್ನಿಸಿದ್ದು, ಇದರಿಂದ ಮನನೊಂದು ತಂದೆ ಪುಟ್ಟಸ್ವಾಮಯ್ಯ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರು ದಾಖಲಿಸಿಕೊಂಡ ಸಬ್‍ಇನ್ಸ್‍ಪೆಕ್ಟರ್ ಗಿರೀಶ್ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin