ನಂಜುಂಡಿ ವಿರುದ್ಧ ಕಿಡ್ನಾಪ್ ಕೇಸ್ : ಲಕ್ಷ್ಮೀಗೋಲ್ಡ್ ಪ್ಯಾಲೆಸ್‍ ಮ್ಯಾನೇಜರ್ ಸೇರಿ ಮೂವರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

KP-Nanjundi--01

ಬೆಂಗಳೂರು, ಫೆ.23– ಅಪಹರಣ ಆರೋಪದ ದೂರಿನ ಮೇರೆಗೆ ಲಕ್ಷ್ಮೀಗೋಲ್ಡ್ ಪ್ಯಾಲೆಸ್‍ನ ಮ್ಯಾನೇಜರ್ ವಿಜಯಕುಮಾರ್ ಸೇರಿದಂತೆ ಮೂವರನ್ನು ವಿಜಯನಗರ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಲಕ್ಷ್ಮೀಗೋಲ್ಡ್ ಪ್ಯಾಲೆಸ್ ಅಂಗಡಿಯಲ್ಲಿ ಕೆಲಸ ಮಾಡುವ ಮ್ಯಾನೇಜರ್ ವಿಜಯಕುಮಾರ್ ಅವರನ್ನು ಮಾಲೀಕರ ಕುಮ್ಮಕ್ಕಿನಿಂದ ಅಪಹರಿಸಿ ಕಿರುಕುಳ ನೀಡಲಾಗಿದೆ ಎಂದು ಮ್ಯಾನೇಜರ್ ಪತ್ನಿ ಅಲಮೇಲು ನಿನ್ನೆ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ.  ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಮೈಸೂರಿನಲ್ಲಿದ್ದ ವಿಜಯಕುಮಾರ್, ರಾಜನ್, ರಾಜುಕಾರ್ಯ ಅವರನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಮ್ಯಾನೇಜರ್ ವಿಜಯ್‍ಕುಮಾರ್ ಅವರ ಪತ್ನಿ ಅಲಮೇಲು ಅವರು ತಮ್ಮ ಪತಿಯನ್ನು ಲಕ್ಷ್ಮೀಗೋಲ್ಡ್ ಪ್ಯಾಲೇಸ್‍ನ ಮಾಲೀಕ ಕೆ.ಪಿ.ನಂಜುಂಡಿ ಅವರ ಕುಮ್ಮಕ್ಕಿನಿಂದ ರಾಜನ್, ರಾಮಕೃಷ್ಣ, ರಾಜುಕಾರ್ಯ ಅವರು ಅಪಹರಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ.  ಕೆ.ಪಿ.ನಂಜುಂಡಿ ಅವರು ಮಾಧ್ಯಮಗಳ ಜತೆ ಮಾತನಾಡಿ, ವಿಜಯಕುಮಾರ್ ಹಲವು ವರ್ಷಗಳಿಂದ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಮೈಸೂರು ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದಾರೆ. ಅವರನ್ನು ಅಪಹರಿಸಿಲ್ಲ. ಅದರ ಅಗತ್ಯವೂ ಇಲ್ಲ ಎಂದಿದ್ದಾರೆ.

ಮೈಸೂರು ಶಾಖೆಯಲ್ಲಿ ಇತ್ತೀಚೆಗೆ ಆಡಿಟ್ ನಡೆದಾಗ 1.50 ಲಕ್ಷ ರೂ.ನ ಆಭರಣ, 18 ಸಾವಿರ ರೂ.ಗಳ ಹಣ ವ್ಯತ್ಯಾಸ ಕಂಡು ಬಂದಿದ್ದು, ವಿಚಾರಿಸಿದಾಗ ವಿಜಯಕುಮಾರ್ ತಪ್ಪು ಮಾಡಿದ್ದೇನೆ. ನನ್ನ ಕ್ಷಮಿಸಿ ಹಣ, ಆಭರಣ ತಂದುಕೊಡುತ್ತೇನೆ. ಪೊಲೀಸರಿಗೆ ಹಿಡಿದುಕೊಡಬೇಡಿ ಎಂದು ಗೋಗರೆದಿದ್ದರು. ಹಾಗಾಗಿ ಮಾನವೀಯತೆ ಮೇರೆಗೆ ಪೊಲೀಸ್ ದೂರು ನೀಡಿರಲಿಲ್ಲ ಎಂದು ಹೇಳಿದ್ದಾರೆ.  ವಿಜಯಕುಮಾರ್ ಮಳಿಗೆಯ ಹಣ, ಆಭರಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ದಾಖಲೆಗಳು ತಮ್ಮ ಬಳಿಯಿದೆ ಎಂದು ತಿಳಿಸಿದ್ದಾರೆ. ಸದ್ಯ ವಿಜಯನಗರ ಪೊಲೀಸರು ರಾಜನ್, ರಾಜುಕಾರ್ಯ ಹಾಗೂ ವಿಜಯಕುಮಾರ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin