‘ನಾನು ಕತ್ತೆಗಳಿಂದ ಸ್ಪೂರ್ತಿ ಪಡೆದುಕೊಳ್ಳುತ್ತೇನೆ, : ಅಖಿಲೇಶ್ ಗೆ ಮೋದಿ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Modi-UP

ಬಹ್ರೈಚ್ ಫೆ.23 : ಗುಜರಾತ್ ನ ಕತ್ತೆಗಳ ಪರ ಪ್ರಚಾರ ಮಾಡಬೇಡಿ ಎಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಗೆ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೀಡಿದ್ದ ಸಲಹೆಗೆ ಗುರುವಾರ ಉತ್ತರ ಪ್ರದೇಶದ ಬಹ್ರೈಚ್ ರ್ಯಾಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.  ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಕತ್ತೆಗಳಿಂದ ಸ್ಪೂರ್ತಿ ಪಡೆದುಕೊಳ್ಳುತ್ತೇನೆ, ಈ ದೇಶದ ಜನರು ನನ್ನ ಯಜಮಾನರು. ಯಜಮಾನರಿಗಾಗಿ ಹಗಲಿರುಳು ಕೆಲಸ ದುಡಿಯುತ್ತೇನೆ ಎಂದು ಹೇಳಿದರು. ನೀವಿಂದು ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ಗುಜರಾತ್ ನ ಕತ್ತೆಯ ಚಿತ್ರವನ್ನು ಅಂಚೆಚೀಟಿಯಲ್ಲಿ ಮುದ್ರಿಸಿತ್ತು ಎಂದು ಕೂಡ ಪ್ರಧಾನಿ ಹೇಳಿದರು.
ನೀವು ಪ್ರದರ್ಶಿಸುವ ದ್ವೇಷ ಯೋಗ್ಯವಾಗಿಲ್ಲ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿ ನಿಮ್ಮನ್ನು ಕೂಡ ಮುಳುಗಿಸುತ್ತದೆ ಎಂದು ಸಲಹೆ ನೀಡಿದರು.  ಇಂದು ಉತ್ತರ ಪ್ರದೇಶದ 12 ಜಿಲ್ಲೆಗಳ 53 ವಿಧಾನಸಭಾ ಕ್ಷೇತ್ರಗಳಲ್ಲಿ 4ನೇ ಹಂತದ ಮತದಾನ ನಡೆಯುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin