ಲಿಬಿಯಾ ಕಡಲತೀರದಲ್ಲಿ ತೀರದಲ್ಲಿ ವಲಸಿಗರ 74 ಶವಗಳು ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Libia-01

ಟ್ರಿಪೋಲಿ, ಫೆ.23-ಮೆಡಿಟರೇನಿಯನ್ ಸಮುದ್ರದಲ್ಲಿ ಅಕ್ರಮ ವಲಸಿಗರ ಸಾವಿನ ಸರಣಿ ಮುಂದುವರಿದಿದೆ. ಯುರೋಪ್ ಸೇರುವ ಯತ್ನದಲ್ಲಿ ಸಾಗರದಲ್ಲಿ ಮುಳುಗಿದ್ದ 74 ವಲಸಿಗರ ಮೃತದೇಹಗಳು ಲಿಬಿಯಾ ರಾಜಧಾನಿ ಟ್ರಪೋಲಿಯ ಪಶ್ಚಿಮ ಭಾಗದ ಕಡಲತೀರದಲ್ಲಿ ಪತ್ತೆಯಾಗಿವೆ.  ದಡ ಸೇರಿದ್ದ ನಾಶವಾದ ದೋಣಿ ಮತ್ತು ಅದರೊಳಗಿದ್ದ ಶವಗಳನ್ನು ನೋಡಿ ಜಾವಿಯಾ ಉಪನಗರದ ಹಜರ್ ಗ್ರಾಮದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ತುರ್ತು ರಕ್ಷಣಾ ಕಾರ್ಯಕರ್ತರು ಸಮುದ್ರ ದಡದಿಂದ ಮೃತದೇಹಗಳನ್ನು ಸಾಗಿಸಿದರು. ಸಾಗರದಲ್ಲಿ ಇನ್ನೂ ಹೆಚ್ಚಿನ ಶವಗಳು ಇರಬಹುದೆಂದು ಶಂಕಿಸಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. 100ಕ್ಕೂ ಹೆಚ್ಚು ಅಕ್ರಮ ವಲಸಿಗರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ರೆಡ್ ಕ್ರೆಸೆಂಟ್ ರಕ್ಷಣಾ ಸಂಸ್ಥೆ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin