ವಿದೇಶಗಳಿಗೆ ಸಾಗಿಸಲು ಸಂಗ್ರಹಿಸಿಟ್ಟಿದ್ದ 3.50 ಕೋಟಿ ಮೌಲ್ಯದ ರಕ್ತ ಚಂದನ ವಶ

ಈ ಸುದ್ದಿಯನ್ನು ಶೇರ್ ಮಾಡಿ

red-sadal--01

ಬೆಂಗಳೂರು, ಫೆ.23- ವಿದೇಶಗಳಿಗೆ ಕಳ್ಳ ಸಾಗಾಣಿಕೆ ಮಾಡಲು ಅಕ್ರಮವಾಗಿ ರಕ್ತ ಚಂದನವನ್ನು ಸಂಗ್ರಹಿಸಿಟ್ಟಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 3.86 ಕೋಟಿ ಬೆಲೆಬಾಳುವ 1990 ಕೆಜಿ ರಕ್ತ ಚಂದನದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದಾರೆ. ಬೊಮ್ಮನಹಳ್ಳಿ ವಿಶ್ವೇಶ್ವರಯ್ಯ ರಸ್ತೆ ನಿವಾಸಿ ಹಮೀದ್‍ಖಾನ್ ಅಲಿಯಾಸ್ ಹಮೀದ್ (48) ಬಂಧಿತ ಆರೋಪಿ. ಆರೋಪಿಯು ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಸ್ತನ ಅಗ್ರಹಾರ, ದೊಡ್ಡನಾಗಮಂಗಲ ರಸ್ತೆ, ನಂ.39ರ ಮನೆಯಲ್ಲಿ ವಿನಾಶದ ಅಂಚಿನಲ್ಲಿರುವ  ಅಮೂಲ್ಯ ಅರಣ್ಯ ಸಂಪತ್ತಾದ ರಕ್ತ ಚಂದನದ ಮರದ ತುಂಡುಗಳನ್ನು ಕಳವು ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ.

ಖಚಿತ ಮಾಹಿತಿ ಮೇರೆಗೆ ಆರೋಪಿಗೆ ಸೇರಿದ ಗೋಡೌನ್‍ಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು 3.86 ಕೋಟಿ ರೂ. ಬೆಲೆಬಾಳುವ 1990 ಕೆಜಿ ತೂಕದ ರಕ್ತ ಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.  ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಹಮೀದ್‍ಖಾನ್ ವಿರುದ್ಧ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ 11 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ.  ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತ ಎಸ್.ರವಿ ಅವರ ನಿರ್ದೇಶನದಲ್ಲಿ ಉಪ ಪೊಲೀಸ್ ಆಯುಕ್ತ ಎಚ್.ಡಿ.ಆನಂದ್‍ಕುಮಾರ್ ನೇತೃತ್ವದಲ್ಲಿ ಸಿಸಿಬಿ, ಎಸಿಪಿ ಎಚ್.ಎಂ.ಮಹದೇವಪ್ಪ, ಇನ್ಸ್‍ಪೆಕ್ಟರ್ ಆರ್.ಭಾನುಪ್ರಸಾದ್, ಡಾ.ಬಿ.ಎಸ್.ಸುಧಾಕರ್ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin