ಸಂಚಾರಿ ಆರೋಗ್ಯ ಘಟಕದ ಸೇವೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

puttannayya

ಪಾಂಡವಪುರ, ಫೆ.23- ಮೊಬೈಲ್ ಯುನಿಟ್ ಸೇವೆಯಿಂದಾಗಿ ಸರ್ಕಾರಿ ಆಸ್ಪತ್ರೆಗೆ ಒತ್ತಡ ಕಡಿಮೆಯಾಗುವ ಜತೆಗೆ ಸಣ್ಣ ಪುಟ್ಟ ಕಾಯಿಲೆ ವಾಸಿ ಮಾಡಬಹುದಾಗಿದ್ದು, ಆಯಾ ಹಳ್ಳಿಗಳಿಗೆ ಮೊಬೈಲ್ ಯೂನಿಟ್ ಯಾವ ಸಮಯಕ್ಕೆ ಬರಬೇಕು ಎಂಬುದನ್ನು ಆರೋಗ್ಯ ಇಲಾಖೆಗೆ ಆದೇಶ ನೀಡಬೇಕು ಎಂದು ಶಾಸಕ ಪುಟ್ಟಣ್ಣಯ್ಯ ಸೂಚಿಸಿದರು.ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಾಲೂಕಿಗೆ ಒದಗಿಸಿರುವ ಸಂಚಾರಿ ಆರೋಗ್ಯ ಘಟಕದ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮಗಳಲ್ಲಿ ಸಂಚರಿಸಿ ಈ ಘಟಕ ಸೇವೆ ಒದಗಿಸಲಿದೆ ಎಂದರು.

ಇದರಲ್ಲಿ ಓರ್ವ ವೈದ್ಯ, ಇಬ್ಬರು ಸ್ಟಾಫ್ ನರ್ಸ್, ಒಬ್ಬ ಫಾರ್ಮಸಿಸ್ಟ್, ಲ್ಯಾಬ್‍ಟೆಕ್ನಿಷಿಯನ್, ಚಾಲಕ ಸೇರಿದಂತೆ 6 ಸಿಬ್ಬಂದಿಗಳಿದ್ದಾರೆ. ಸರ್ವೇ ಕಾರ್ಯ ಮುಗಿದಿದ್ದು, ಪ್ರತಿ ಹಳ್ಳಿಗೂ ಭೇಟಿ ನೀಡಿ ಉಚಿತ ಆರೋಗ್ಯ ಸೇವೆ ನೀಡಲು ಸಿದ್ದವಿದೆ. ಪ್ರಥಮ ಚಿಕಿತ್ಸೆ ಸೇರಿದಂತೆ ಔಷಧಿಗಳನ್ನು ಹೊಂದಿದೆ ಎಂದು ಯೋಜನೆಯ ಸಿಇಒ ಶಿವಣ್ಣಗೌಡ ವಿವರ ನೀಡಿದರು. ಜಿ.ಪಂ ಸದಸ್ಯೆ ಅನುಸೂಯ, ತಾ.ಪಂ ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷೆ ಎಚ್.ಲಕ್ಷ್ಮಮ್ಮ ರಂಗಸ್ವಾಮಿ, ಸದಸ್ಯರಾದ ಎಚ್.ಸಿ.ಶೋಭಾ, ವಿ.ಎಸ್.ನಿಂಗೇಗೌಡ, ಪೂರ್ಣಿಮಾ, ಗಾಯತ್ರಿ ಕಾಂತರಾಜು, ನವೀನ ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎನ್.ಆಶಾಲತಾ, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಜಯಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin