ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ : ಕಾಮುಕ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

rape--case

ಕೆ.ಆರ್.ಪೇಟೆ, ಫೆ.24- ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಆರೋಪಿಯನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಕಾಮನಹಳ್ಳಿಯ ಪ್ರದೀಪ್(22) ಬಂಧಿತ ಆರೋಪಿ.

ಘಟನೆ ವಿವರ:

ಬಾಲಕಿಯು ಕಾಮನಹಳ್ಳಿಯಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದ ಸಂದರ್ಭದಲ್ಲಿ ಈತ ಪರಿಚಯ ಮಾಡಿಕೊಂಡಿದ್ದನು. ಈ ಬಾಲಕಿಯು ಸೋಮನಹಳ್ಳಿಯ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿರುವ ಬಗ್ಗೆ ತಿಳಿದುಕೊಂಡು ಆಕೆಯನ್ನು ಫೆ.21ರಂದು ಶಾಲೆಯಿಂದ ಊಟಕ್ಕೆಂದು ಹೊರಬಂದ ವೇಳೆ ತನ್ನ ಬೈಕಿನಲ್ಲಿ ಅಂಬಿಗರಹಳ್ಳಿಯ ಸಂಗಮದ ಸಮೀಪ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದನು. ಈ ಬಗ್ಗೆ ಅತ್ಯಾಚಾರಕ್ಕೊಳಗಾದ ಬಾಲಕಿಯು ಪ್ರದೀಪನು ಮಾಡಿ ಮೋಸವನ್ನು ಪ್ರೋಷಕರಿಗೆ ತಿಳಿಸಿದ್ದಾಳೆ. ತಕ್ಷಣ ಬಾಲಕಿಯ ಪ್ರೋಷಕರು ಪ್ರದೀಪನ ಪ್ರೋಷಕರ ಬಳಿ ಹೋಗಿ ಕೇಳಲಾಗಿ ಅವರಿಂದ ಉಡಾಫೆಯ ಉತ್ತರ ನೀಡಿದ್ದರಿಂದ ಬೇಸತ್ತ ಬಾಲಕಿಯ ಪ್ರೋಷಕರು ನ್ಯಾಯಕ್ಕಾಗಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದರು. ತಕ್ಷಣ ಸಬ್‍ಇನ್ಸ್‍ಪೆಕ್ಟರ್ ಗಿರೀಶ್ ಅವರು ಪ್ರೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪ್ರದೀಪನನ್ನು ಬಂಧಿಸಿ ನ್ಯಾಯಾಧೀಶರ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin