ಪರಿಶೀಲನೆ ನಡೆಸದೆ ಡೈರಿ ನಂಬಲಾಗದು : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

param

ಬೆಂಗಳೂರು, ಫೆ.24- ಡೈರಿಯಲ್ಲಿ ತಾಂತ್ರಿಕ ಅಂಶಗಳ ಬಗ್ಗೆ ನಿಖರತೆ ದೊರೆಯದ ಹೊರತು ಆರೋಪಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೈರಿಯಲ್ಲಿ ಯಾರ ಹೆಸರೂ ನಿಖರವಾಗಿಲ್ಲ. ಎಲ್ಲವೂ ಇನ್ಷಿಯಲ್‍ಗಳಲ್ಲಿ ನಮೂದಾಗಿವೆ ಮತ್ತು ಅಕ್ಷರಗಳು ಏಕಮಾದರಿಯಲ್ಲಿದ್ದು, ಒಂದೇ ಬಾರಿಗೆ ಬರೆದಂತೆ ಇವೆ.   ಡೈರಿಯಲ್ಲಿ ಬಹಿರಂಗ ಗೊಂಡಿರುವ ಮಾಹಿತಿಗಳನ್ನು ದೃಢೀ ಕರಿಸಲು ಸೂಕ್ತ ಸಾಕ್ಷಾಧಾರಗಳು ಇಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರೇ ಆ ಡೈರಿ ನನ್ನದಲ್ಲ. ಕೈ ಬರ ನನ್ನದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ತಾಂತ್ರಿಕ ಅಂಶಗಳನ್ನು ಪರಿಶೀಲಿಸದ ಹೊರತು ಏನನ್ನೂ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin