ವಾಟ್ಸಾಪ್- ಫೇಸ್‍ಬುಕ್ ನಲ್ಲಿ ತೇಲಾಡುತ್ತಿವೆ ಹೈಕಮಾಂಡ್‍ಗೆ ಬಿಜೆಪಿ ನೀಡಿದ ಕಪ್ಪಕಾಣಿಕೆ ಡೈರಿ ಪುಟಗಳು..!

ಈ ಸುದ್ದಿಯನ್ನು ಶೇರ್ ಮಾಡಿ

BJP-Dairy-Bomb

ಬೆಂಗಳೂರು, ಫೆ.24- ಕಾಂಗ್ರೆಸ್ ಎಂಎಲ್‍ಸಿ ಗೋವಿಂದರಾಜು ಡೈರಿ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಅದೇ ಮಾದರಿಯಲ್ಲಿ ಬಿಜೆಪಿ ಹೈಕಮಾಂಡ್‍ಗೆ ಕಪ್ಪಕಾಣಿಕೆ ಸಂದಾಯ ಮಾಡಿರುವ ಡೈರಿಯ ಪುಟಗಳು ವಾಟ್ಸಾಪ್ ಮತ್ತು ಪೇಸ್‍ಬುಕ್‍ನಲ್ಲಿ ಹರಿದಾಡುತ್ತಿವೆ. ಆದರೆ, ವಾಟ್ಸ್‍ಆಪ್‍ನಲ್ಲಿ ಹರಿದಾಡುತ್ತಿರುವ ಡೈರಿಯ ಸತ್ಯಾಸತ್ಯತೆ ಬಗ್ಗೆ ಈವರೆಗೂ ಎಲ್ಲೂ ಬಹಿರಂಗವಾಗಿಲ್ಲ. ಇತ್ತೀಚೆಗಷ್ಟೆ ಬಿಜೆಪಿಯ ವಿಧಾನಪರಿಷತ್ ಸದಸ್ಯ ಲೇಹರ್‍ಸಿಂಗ್ ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು ಎಂದು ಹೇಳಲಾಗಿದೆ.  ಲೇಹರ್‍ಸಿಂಗ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪರಮಾಪ್ತರಾಗಿದ್ದು. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹೈಕಮಾಂಡ್ ಮತ್ತು ರಾಜ್ಯ ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡಿದ್ದರು.

ಅವರ ಮನೆಯಲ್ಲಿ ಸಿಕ್ಕ ಡೈರಿ ಎಂದು ಉಲ್ಲೇಖಿಸಿ ವಾಟ್ಸ್‍ಆಪ್ ಹಾಗೂ ಪೇಸ್‍ಬುಕ್‍ನಲ್ಲಿ ಮೆಸೆಜ್‍ಗಳು ಹರಿದಾಡುತ್ತಿವೆ. ವಾಟ್ಸ್‍ಆಪ್ ಮೆಸೆಜ್ ಆಧರಿಸಿ ಹೇಳುವುದಾದರೆ ರಿಸೀವ್ಡ್ ಎಂಬ ಶೀರ್ಷಿಕೆಯಡಿ ಸಿಎಂಒ+ಆರ್‍ಎ-67 ಕೋಟಿ, ಎಂಐಆರ್‍ಎಎಲ್‍ಐ-128 ಕೋಟಿ, ರೇಣು-13ಕೋಟಿ, ಜೆಎಸ್-9, ಎಸ್‍ಕೆ-3, ಎಸ್‍ಆರ್-1.80ಕೋಟಿ, ಆರ್‍ಎ+ಕೆಎಸ್‍ಇ-31, ಡಿವಿಎಸ್+ಪಿಎಸ್-11 ಕೋಟಿ, ಇತರೆ ಕಂಪೆನಿಗಳು ಮತ್ತು ಕಾರ್ಪೊರೇಟ್ ಗಳಿಂದ 128 ಕೋಟಿ ಎಂದು ಉಲ್ಲೇಖಿಸಲಾಗಿದ್ದು, ಕೊನೆಗೆ ಒಟ್ಟು ಮೊತ್ತವನ್ನು 391.08 ಕೋಟಿ ಎಂದು ನಮೂದಿಸಲಾಗಿದೆ.

ಪೈಡ್ ಸೆಂಟ್ರಲ್ ಲೀಡರ್ಸ್ (ಕೇಂದ್ರಕ್ಕೆ ಕೊಟ್ಟಿದ್ದು) ಬಿಜೆಪಿ ಎಂಬ ಶೀರ್ಷಿಕೆಯಡಿ ಎಎಸ್-34ಕೋಟಿ, ಬಿಎಸ್‍ವೈ-69, ನಮೋ-120, ಎಸ್‍ಎಸ್-7, ಎಕೆ-18, ಎಂ.ಡಿ.ರಾವ್-4.08ಕೋಟಿ, ಡಿಪಿ-9, ಪೇಡ್ ಫಂಡ್-90, ಮೀಡಿಯಾ-10, ಎಚ್‍ವಿ(ಡೆಲ್ಲಿ ಎಲೆಕ್ಷನ್)-30 ಕೋಟಿ ಎಂದು ನಮೂದಿಸಿದ್ದು, ಕೊನೆಯಲ್ಲಿ ಒಟ್ಟು ಮೊತ್ತವನ್ನು 391.08ಕೋಟಿ ಎಂದು ಲೆಕ್ಕ ಸರಿದೂಗಿಸಲಾಗಿದೆ. ಕೊನೆಯಲ್ಲಿ ಲೇಹರ್‍ಸಿಂಗ್ ಎಂದು ಸಹಿ ಮಾಡಲಾಗಿದೆ.  ಈ ಡೈರಿ ಪುಟದ ಪೋಟೋ ತೆಗೆದು ವಾಟ್ಸ್‍ಆಪ್-ಪೇಸ್‍ಬುಕ್‍ನಲ್ಲಿ ಹರಿಯಬಿಡಲಾಗಿದೆ. ಇದು ಬಿಜೆಪಿಗೆ ಪ್ರತ್ಯುತ್ತರ ನೀಡುವ ಹುನ್ನಾರವೋ ಅಥವಾ ವಾಸ್ತವವೋ ಸ್ಪಷ್ಟವಾಗಿ ತಿಳಿಯುತ್ತಿಲ್ಲ.  ಒಟ್ಟಿನಲ್ಲಿ ರಾಜಕೀಯ ವಲಯದಲ್ಲಿ ಇದು ಮಿಂಚಿನಂತೆ ಹರಿದಾಡುತ್ತಿದೆ. ನಿನ್ನೆಯಷ್ಟೇ ಎಂಎಲ್‍ಸಿ ಗೋವಿಂದರಾಜು ಡೈರಿ ಬಹಿರಂಗಗೊಂಡು ಕಾಂಗ್ರೆಸ್‍ಗೆ ತೀವ್ರ ಮುಜುಗರವಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin