ಇರಾಕ್ ಸೇನೆಯಿಂದ ಮೊಸುಲ್ ಏರ್‍ಪೋರ್ಟ್ ವಶ, ಉಗ್ರರಿಂದ ಪ್ರತಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Masul

ಮೊಸುಲ್, ಫೆ.25-ಅಮೆರಿಕ ಬೆಂಬಲಿತ ಇರಾಕ್ ಪಡೆಗಳು ಮೊಸುಲ್ ವಿಮಾನ ನಿಲ್ದಾಣವನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರಿಂದ ವಶಪಡಿಸಿಕೊಂಡಿವೆ. ಇನ್ನೊಂದಡೆ ಉಗ್ರರು ಕಾರ್‍ಬಾಂಬ್, ಗ್ರೆನೇಡ್ ಮತ್ತು ಮೋಟಾರ್‍ಗಳನ್ನು ಹೊತ್ತ ಡ್ರೋಣ್‍ಗಳನ್ನು ಬಳಸಿ ಹೋರಾಟವನ್ನು ತೀವ್ರಗೊಳಿಸಿವೆ. ಇರಾಕ್‍ನ ಎರಡನೇ ಅತಿ ದೊಡ್ಡ ಪಟ್ಟಣವಾದ ಮೊಸುಲ್‍ನನ್ನು ಉಗ್ರರ ಹಿಡಿತದಿಂದ ಸೇನೆಯು ವಿಮೋಚನೆಗೊಳಿಸಿದ್ದರೂ ಐಎಸ್ ಬಂಡುಕೋರರು ಅಂತಿಮ ಹಂತದ ಪ್ರತಿದಾಳಿಯನ್ನು ತೀವ್ರಗೊಳಿಸಿದ್ದಾರೆ.   ಮೊಸುಲ್‍ನ ಪಶ್ಚಿಮ ಭಾಗದಲ್ಲಿ ಭಯೋತ್ಪಾದಕರ ಪ್ರಮುಖ ಭದ್ರನೆಲೆಯಾಗಿದ್ದ ವಿಮಾನ ನಿಲ್ದಾಣವನ್ನು ವಶಪಡಿಸಿಕೊಳ್ಳುವುದಕ್ಕಾಗಿ ಭಯೋತ್ಪಾದನೆ ನಿಗ್ರಹ ಪಡೆಗಳು ನಿರ್ಣಾಯಕ ಹೋರಾಟ ನಡೆಸಿ ಸಫಲವಾದವು.

ಮತ್ತೊಂದೆಡೆ ನೈರುತ್ಯ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಘೋಜ್ಲಿನಿ ಸೇನಾ ನೆಲೆಯನ್ನು ಪ್ರವೇಶಿಸಿ ಇತರ ಜಿಲ್ಲೆಗಳತ್ತ ಮುನ್ನುಗ್ಗಿದವು ಎಂದು ಸ್ಥಳದಲ್ಲಿರುವ ರಾಯಿಟರ್ರ್ ಸುದ್ದಿ ಸಂಸ್ಥೆ ವರದಿಗಾರರು ಹೇಳಿದ್ದಾರೆ. ತಮ್ಮ ಭದ್ರಕೋಟೆಯನ್ನು ಸೇನಾಪಡೆಗಳು ವಶಪಡಿಸಿಕೊಂಡಿರುವುದರಿಂದ ಕುಪಿತಗೊಂಡ ಉಗ್ರರು ಮಾನವ ಬಾಂಬ್ ದಾಳಿ ಮೂಲಕ ನಿನ್ನೆ 29 ಮಂದಿಯನ್ನು ಕೊಂದು ಹಾಕಿದ್ದಾರೆ. ಭಯೋತ್ಪಾದಕರ ಕ್ರೌರ್ಯಕ್ಕೆ ಮುಗ್ಧ ನಾಗರಿಕರು ಬಲಿಯಾಗುವ ಸಾಧ್ಯತೆ ಇದ್ದು, ಕಟ್ಟೆಚ್ಚರ ವಹಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin