ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

10

ಬೆಳಗಾವಿ,ಫೆ.25- ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಿನ್ನೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯವಾಗಿ ಮಾರ್ಚ್ 11ರಂದು ಉಪನ್ಯಾಸ, ಕಾವ್ಯವಚನ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಎಸ್.ಎಮ್. ಕಲ್ಲೂರ ಹೇಳಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಪತ್ರಿಕಾಗೊಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ವಿವರಿಸಿ ಮಾತನಾಡಿ, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮುಗಳಿಹಾಳದ ಆರೂಡ ಮಠದ ಶಿವಪುತ್ರ ಮಹಾಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಕರ್ನಾಟಕ ವಚನ ಸಾಹಿತ್ಯ ಪರಿಷ್ಯತ್ತಿನ ಅಧ್ಯಕ್ಷ ಎಂ.ವಿ. ತ್ಯಾಗರಾಜ ನೇರವೇರಿಸುವರು ಎಂದರು.ಮುಖ್ಯ ಅತಿಥಿಗಳಾಗಿ ಸವದತ್ತಿಯ ರಾಷ್ಟ್ರೀಯ ಬಸವ ದಳದ ಗೌರವಾದ್ಯಕ್ಷ ಆನಂದ ಚೋಪ್ರಾ ಆಗಮಿಸುವರು. ಶರಣ ವಚನ ತತ್ವಗಳಲ್ಲಿ ಮಹಿಳಾ ಚಿಂತನೆ ಕುರಿತು ಸಾಧನಾ ಪೋಟೆ ಉಪನ್ಯಾಸ ನೀಡುವರು. ಹಿರಿಯ ಸಾಹಿತಿ ಸರಾ ಸುಳಕೂಡೆ, ಎಸ್.ಎಮ್. ಶಿರೂರ, ರಾಜೇಂದ್ರ ಪಾಟೀಲ ಎ.ಎಮ್. ಲೋದಿ ಶಕುಂತಲಾ ಭಿ. ವಿದ್ಯಾಪತಿ, ದುರ್ಗಾಯರ ಝರ್ವಿ ಲಕ್ಷ್ಮಣ ಮುನಗುಪ್ಪಿ, ಎಲ್.ಬಿ. ದೊಡಮನಿ, ಆಗಮಿಸುವರ ಎಂದು ಅವರು ತಿಳಿಸಿದರು.

ಜಿಲ್ಲಾಧ್ಯಕ್ಷ ಎಸ್.ಎಮ್. ಕಲ್ಲೂರ, ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ ಮಾತನಾಡಿ, 12ನೇ ಶತಮಾನದ ಶರಣರು ನಡೆದು ಬಂದ ದಾರಿ ಅಂದರೆ ಸಮಾಜದ ಮತ್ತು ವ್ಯಕ್ತಿಯ ಬದಲಾವಣೆಗೆ ಶರಣ ವಚನಗಳ ಮಾರ್ಗದರ್ಶನ ಅವಶ್ಯವಾಗಿದೆ ಜೊತೆಗೆ ಸಮಾಜದ ಸುಧಾರಣೆಗೆ ಮಹಿಳಾ ಸಬಲೀಕರಣಕ್ಕೆ ವ್ಯಕ್ತಿಯ ಬದಲಾವಣೆಗೆ ವಚನಗಳ ವಚನಕಾರ ಜೀವನ ಸಾಧನೆ ಬಹು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ತಾಲೂಕು, ಜಿಲ್ಲೆಗಳಲ್ಲಿ ನಮ್ಮ ಘಟಕದ ವತಿಯಿಂದ ಕಾರ್ಯಕ್ರಮಗಳನ್ನು ಮಾಡಿ ಜನರನ್ನು ಜಾಗೃತರ್ನಾಗಿ ಮಾಡುವುದೇ ನಮ್ಮ ಗುರಿ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿ ಸಮಾಜ ಸುಧಾರಣೆಗೆ ಯುವಕರು ಯುವತಿಯರಿಗೆ ಪ್ರೋ ಕೊಡುವುದೇ ನಮ್ಮ ಉದ್ದೇಶವಾಗಿದೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿಬಸವರಾಜ ಸುಣಗಾರ, ಕೋಶಾದ್ಯಕ್ಷರಾದ ಸೋಮಶೇಖರ್ ಸೋಗಲದ, ರಾಜೇಂದ್ರ ಪಾಟೀಲ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin