ಜನರ ಅಗತ್ಯತೆ ಪೂರೈಸುವಂತಹ ಸಂಶೋಧನೆ ನಡೆಸಿ : ಮನ್ ಕಿ ಬಾತ್ ನಲ್ಲಿ ವಿಜ್ಞಾನಿಗಳಿಗೆ ಮೋದಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ನವದೆಹಲಿ,ಫೆ.26-ಜನಸಾಮಾನ್ಯರ ಅಗತ್ಯತೆಗಳನ್ನು ಪೂರೈಸುವಂತಹ ಮಹತ್ವದ ಸಂಶೋಧನೆಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ. ವಿಜ್ಞಾನಿಗಳ ಸಮೂಹವು ಜನರ ಅಗತ್ಯತೆಗಳನ್ನು ಅರಿಯಬೇಕು ಮತ್ತು ಅವರಿಗೆ ಪೂರಕವಾದಂತಹ ಅನ್ವೇಷಣೆಗಳನ್ನು ಸಾಕಾರಗೊಳಿಸಬೇಕೆಂದು ಅವರು ಸಲಹೆ ಮಾಡಿದ್ದಾರೆ.
ತಮ್ಮ 29ನೇ ಮನ್ ಕಿ ಬಾತ್ ಬಾನುಲಿ ಭಾಷಣದಲ್ಲಿ ರಾಷ್ಟ್ರ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರಸ್ತುತ ಸನ್ನಿವೇಶದಲ್ಲಿ ದೇಶದ ಸರ್ವತೋಮುಖ ಅಭಿವೃದ್ದಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಬಹುದೊಡ್ಡದು. ಈ ನಿಟ್ಟಿನಲ್ಲಿ ನಮ್ಮ ದೇಶದ ವಿಜ್ಞಾನಿಗಳು ಮಹತ್ವದ ಸಾಧನೆಗಳನ್ನು ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಭಾರತೀಯ ಬಾಹಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಿಂದ ಯಶಸ್ವಿಯಾಗಿ ನಡೆಸಲಾದ 104 ಉಪಗ್ರಹಗಳ ಉಡಾವಣೆ ಸಾಧನೆಯ ವಿಶ್ವವಿಕ್ರಮವನ್ನು ಉಲ್ಲೇಖಿಸಿದರು.

ಇಸ್ರೋ ಸಾಧನೆಯಿಂದ ಭಾರತಕ್ಕೆ ವಿಶ್ವಾದ್ಯಂತ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಈ ಮಹತ್ವದ ವಿಕ್ರಮಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಇದಕ್ಕಾಗಿ ನಾನು ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿಕೊಂಡರು.   ಇದೇ ಸಂದರ್ಭದಲ್ಲಿ ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡ ವೃದ್ದೆಯೊಬ್ಬರಿಗೆ, ಡಿಜಿಟಲ್ ಲಕ್ಕಿ ಡ್ರಾದಲ್ಲಿ ಬಂದ ಹಣವನ್ನು ದಾನ ಮಾಡಿದ ಮೈಸೂರಿನ ಯುವಕ ಸಂತೋಷ್‍ಗೆ ಪ್ರಧಾನಿ ಅಭಿನಂದನೆ ಸಲ್ಲಿಸಿದರು.   ವೃದ್ದೆಗೆ ಬಹುಮಾನದ ಹಣವನ್ನು ದಾನ ಮಾಡುವ ಮೂಲಕ ಸಂತೋಷ್ ಮಾನವೀಯತೆ ಮೆರೆದಿದ್ದಾರೆ. ಇದು ನಿಜಕ್ಕೂ ಆದರ್ಶಪ್ರಾಯ ಎಂದು ಮೋದಿ ಶ್ಲಾಘಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin