ಬಾತ್ಮಿದಾರರಿಗೆ ನೀಡುವ ಭರ್ಜರಿ ಔತಣಕೂಟಕ್ಕೆ ‘ಮಾಧ್ಯಮ ದ್ವೇಷಿ’ ಟ್ರಂಪ್ ಗೈರು..!

ಈ ಸುದ್ದಿಯನ್ನು ಶೇರ್ ಮಾಡಿ

Trump-01

ವಾಷಿಂಗ್ಟನ್,ಫೆ.26-ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಮಾಧ್ಯಮದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಡೊನಾಲ್ಡ್ ಟ್ರಂಪ್ ಈಗ ಕೈಗೊಂಡ ಮತ್ತೊಂದು ನಿರ್ಧಾರದಿಂದ ಶಾಸಕಾಂಗ ಮತ್ತು ಪತ್ರಿಕಾರಂಗ ಕಂದಕ ಮತ್ತಷ್ಟು ಹೆಚ್ಚಾಗಿದೆ.   ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ವೇತಭವನದ ಬಾತ್ಮಿದಾರರಿಗೆ ಭರ್ಜರಿ ಔತಣಕೂಟ ನೀಡುವ ಪರಿಪಾಠ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಟ್ರಂಪ್ ಈ ಭೋಜನಕೂಟದಲ್ಲಿ ಭಾಗವಹಿಸದಿರಲು ನಿರ್ಧರಿಸುವ ಮೂಲಕ ಮಾಧ್ಯಮದ ಬಗ್ಗೆ ತಮಗಿರುವ ಅಸಹನೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಬಾತ್ಮಿದಾರರಿಗೆ ಏರ್ಪಡಿಸಿರುವ ಔತಣಕೂಟದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಟ್ರಂಪ್ ಘೋಷಿಸುವ ಮೂಲಕ ಅಮೆರಿಕ ರಾಜಕೀಯ ಇತಿಹಾಸದಲ್ಲಿ ಇಂಥ ಆಚರಣೆಯನ್ನು ತಪ್ಪಿಸಿಕೊಂಡ ಪ್ರಪ್ರಥಮ ಅಧ್ಯಕ್ಷ ಎಂಬ ಕುಖ್ಯಾತಿಗೂ ಪಾತ್ರರಾಗಿದ್ದಾರೆ.   ತಾವು ಈ ವರ್ಷದ ಶ್ವೇತಭವನ ಬಾತ್ಮಿದಾರರ ಸಂಘ(ಡಬ್ಲ್ಯೂಎಚ್‍ಸಿಎ)ಕ್ಕೆ ಔತಣಕೂಟದಲ್ಲಿ ಭಾಗವಹಿಸುತ್ತಿಲ್ಲ. ಪ್ರತಿಯೊಬ್ಬರು ಸುಂದರ ಸಂಜೆ ಔತಣಕೂಟನ್ನು `ಎಂಜಾಯ್’ ಮಾಡಿ ಎಂದಷ್ಟೇ ಸಂದೇಶ ರವಾನಿಸುವ ಮೂಲಕ ಮತ್ತೊಮ್ಮೆ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin