ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ್ದಕ್ಕೆ ಝಾಡಿಸಿ ಒದ್ದ ಪತ್ನಿ, ಪತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Rape--01

ಬೆಂಗಳೂರು, ಫೆ.26- ಮಾರಣಾಂತಿಕ ಕಾಯಿಲೆ ಇದ್ದರೂ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ ವರ್ತನೆಯಿಂದ ಬೇಸತ್ತ ಪತ್ನಿ ಪತಿಗೆ ಝಾಡಿಸಿ ಒದ್ದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.  ಮೈಸೂರು ರಸ್ತೆಯ ಖಾಸಗಿ ಡಿಸ್ಟಿಲರಿ ಸಂಸ್ಥೆಯಲ್ಲಿ ಚಾಲಕನಾಗಿರುವ ಮಾರುತಿ ನಗರದ ನಿವಾಸಿ ಉದಯಕುಮಾರ್ ಅಲಿಯಾಸ್ ಉಮೇಶ್ (45) ಮೃತಪಟ್ಟ ವ್ಯಕ್ತಿ. ಉದಯಕುಮಾರ್‍ಗೆ ಎಂಟು ವರ್ಷದ ಮಗುವಿದ್ದು ಈತ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದ ಎನ್ನಲಾಗಿದ್ದು , ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಹೀಗಾಗಿ ಪತ್ನಿ ಪತಿಯಿಂದ ಅಂತರ ಕಾಯ್ದುಕೊಂಡಿದ್ದಳು. ನಿನ್ನೆ ಮಧ್ಯರಾತ್ರಿ ಏಕಾಏಕಿ ಉದಯಕುಮಾರ್ ಪತ್ನಿಯನ್ನು ಲೈಂಗಿಕತೆಗೆ ಸಹಕರಿಸುವಂತೆ ಬಲವಂತ ಮಾಡಿದ್ದಾನೆ.
ಆದರೆ ರೋಗ ಗುಣಮುಖವಾಗುವವರೆಗೂ ಲೈಂಗಿಕತೆಯಿಂದ ದೂರ ಉಳಿಯುವಂತೆ ಪತ್ನಿ ಕೇಳಿಕೊಂಡರೂ ಆತ ಬಲವಂತ ಮಾಡಿದಾಗ ಕುಪಿತಗೊಂಡ ಆಕೆ ಪತಿಗೆ ಕಾಲಿನಿಂದ ಝಾಡಿಸಿ ಒದ್ದಿದ್ದಾಳೆ. ಆಕೆ ಒದ್ದ ರಭಸಕ್ಕೆ ಕುಸಿದು ಬಿದ್ದ ಉದಯಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin