2002ರ ಗುಜರಾತ್ ಹತ್ಯಾಕಾಂಡ : ತ್ವರಿತ ವಿಚಾರಣೆಗೆ ಮುಸ್ಲಿಂ ಸಂಘಟನೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Gujarat--v01

ವಾಷಿಂಗ್ಟನ್, ಫೆ.26-ಗುಜರಾತಿನ 2002ರ ಹತ್ಯಾಕಾಂಡಕ್ಕೆ ಸಂಬಂಧಪಟ್ಟ ಮೊಕದ್ದಮೆಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಾಷಿಂಗ್ಟನ್‍ನಲ್ಲಿರುವ ಭಾರತೀಯ ಅಮೆರಿಕನ್ ಮುಸ್ಲಿಂ ಸಂಘಟನೆಯೊಂದು ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದೆ.   ಈ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರಿಗೆ ಅಸೋಸಿಯೇಷನ್ ಆಫ್ ಇಂಡಿಯನ್ ಮುಸ್ಲಿಮ್ಸ್ ಆಫ್ ಅಮೆರಿಕ (ಎಐಎಂ) ಪತ್ರ ಬರೆದಿದೆ. ಕೆಲವು ಪ್ರತ್ಯೇಕತಾವಾದಿ ಸಂಘಟನೆಗಳು ಗುಜರಾತ್ ರಾಜ್ಯದ ವಿವಿಧೆಡೆ ಅಮಾಯಕ ಮುಸ್ಲಿಂ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಸಂಘಟಿತ ಅಮಾನುಷ ಕೃತ್ಯಗಳನ್ನು ನಡೆಸಿ 15 ವರ್ಷಗಳು ಕಳೆದಿವೆ. ಆದರೆ ನೂರಾರು ಅಪರಾಧಿಗಳ ಪೈಕಿ ಕೆಲವರಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಎಐಎಂ ತಿಳಿಸಿದೆ.

ಸುಪ್ರೀಂಕೋರ್ಟ್‍ನ ಸ್ಪಷ್ಟ ಸೂಚನೆಗಳಿದ್ದರೂ, ಗುಜರಾತ್ ಸರ್ಕಾರದಲ್ಲಿರುವ ಅಧಿಕಾರಿಗಳು ಕೋರ್ಟ್‍ಗಳಲ್ಲಿರುವ ಖಟ್ಲೆಗಳ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಅಲ್ಲದೇ ಆರೋಪ ಸಾಬೀತಾಗಿರುವ ಹಲವು ವ್ಯಕ್ತಿಗಳ ಆರೋಗ್ಯದ ಕಾರಣವೊಡ್ಡಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಂಘಟನೆ ಆಪಾದಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin