ಗ್ರಾಮೀಣ ಭಾಗದ ಜನತೆಗೆ ಪ್ರತಿ ತಿಂಗಳಿಗೆ 1 ಲೀಟರ್ ಪಡಿತರ ಸೀಮೆಎಣ್ಣೆ

ಈ ಸುದ್ದಿಯನ್ನು ಶೇರ್ ಮಾಡಿ

kerosene

ಬೆಂಗಳೂರು, ಫೆ.27- ಏಪ್ರಿಲ್‍ನಿಂದ ರಾಜ್ಯದ ಗ್ರಾಮೀಣ ಭಾಗದಲ್ಲಿ ಅಡುಗೆ ಅನಿಲ ಉಳ್ಳವರಿಗೆ ಪ್ರತಿ ತಿಂಗಳು ಒಂದು ಲೀಟರ್ ಹಾಗೂ ಅಡುಗೆ ಅನಿಲ ಇಲ್ಲದವರಿಗೆ 3 ಲೀಟರ್ ಸೀಮೆಎಣ್ಣೆ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀಮೆಎಣ್ಣೆ ಬೇಕಾಗಿರುವವರು ಆಯಾ ಗ್ರಾಮ ಪಂಚಾಯ್ತಿಯಲ್ಲಿ ಸೀಮೆಎಣ್ಣೆ ನಮಗೆ ಬೇಕು ಎಂಬ ಒಪ್ಪಿಗೆಯನ್ನು ಒಮ್ಮೆ ನೀಡಬೇಕು. ಮಾರ್ಚ್‍ನಲ್ಲಿ ಈ ಒಪ್ಪಿಗೆ ಪ್ರಕ್ರಿಯೆ ಮುಗಿಯಲಿದ್ದು, ಏಪ್ರಿಲ್‍ನಿಂದ ಸೀಮೆಎಣ್ಣೆ ವಿತರಿಸಲಾಗುವುದು ಎಂದರು.

1995ರ ನೀತಿ ಪ್ರಕಾರ ಅನಿಲ ಸಂಪರ್ಕ ಉಳ್ಳವರಿಗೆ ಸೀಮೆಎಣ್ಣೆಯನ್ನು ಪಡಿತರ ವ್ಯವಸ್ಥೆಯಡಿ ನೀಡುವುದನ್ನು ರದ್ದುಪಡಿಸಲಾಗಿತ್ತು. ಜತೆಗೆ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದು ಅಡುಗೆ ಅನಿಲ ಉಳ್ಳವರಿಗೆ ಸೀಮೆಎಣ್ಣೆಯನ್ನು ರದ್ದುಪಡಿಸಿತ್ತು.  ಗುಡ್ಡಗಾಡು, ಹಿಂದುಳಿದ ವರ್ಗ ಹಾಗೂ ಗ್ರಾಮೀಣ ಭಾಗದ ಜನರು ನಮಗೆ ಸೀಮೆಎಣ್ಣೆ ಅಗತ್ಯವಿರುವುದರಿಂದ ವಿತರಿಸಬೇಕೆಂದು ಬೇಡಿಕೆಯನ್ನು ಮುಂದಿಟ್ಟಿದ್ದರು. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬೇಡಿಕೆಗೆ ಒಪ್ಪಿಗೆ ಸೂಚಿಸಿರುವುದಾಗಿ ಖಾದರ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin