ಲಾಲಾ ಲ್ಯಾಂಡ್, ಮೂನ್ಲೈಟ್ ಸಿನಿಮಾಗಳಿಗೆ ಆಸ್ಕರ್ ಪ್ರಶಸ್ತಿಗಳ ಸುರಿಮಳೆ
ಲಾಸ್ಏಂಜಲೀಸ್,ಫೆ.27- ಜಗತ್ತಿನ ಚಿತ್ರರಂಗದ ಮಹೋನ್ನತ ಪುರಸ್ಕಾರ ಎಂದೇ ಗುರುತಿಸಿಕೊಂಡಿರುವ 2017ನೇ ಸಾಲಿನ 89ನೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ಇಂದು ಮಾಯಾಲೋಕದ ಶ್ರೇಷ್ಠ ಸಾಧಕರಿಗೆ ಪ್ರದಾನ ಮಾಡಲಾಗಿದೆ. ಲಾ ಲಾ ಲ್ಯಾಂಡ್ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸುತ್ತದೆ ಎಂಬ ಲಕ್ಷಾಂತರ ಅಭಿಮಾನಿಗಳ ಊಹೆಯನ್ನು ತಲೆಕೆಳಗೆ ಮಾಡಿರುವ ಮೂನ್ಲೈಟ್ ಶ್ರೇಷ್ಠ ಸಿನಿಮಾ ಎಂಬ ಆಸ್ಕರ್ ಪ್ರಶಸ್ತಿ ಬಾಚಿಕೊಂಡಿದೆ. ಆದಾಗ್ಯೂ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಟಿ ಸೇರಿದಂತೆ ಒಟ್ಟು ಆರು ಪ್ರಶಸ್ತಿಗಳನ್ನು ಲಾ ಲಾ ಲ್ಯಾಂಡ್ ಗೆದ್ದುಕೊಂಡು ವಿಶ್ವ ಮನ್ನಣೆ ಗಳಿಸಿದೆ. ಇತ್ತೀಚೆಗೆ ಈ ಚಿತ್ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಅತಿ ಹೆಚ್ಚು ಪುರಸ್ಕಾರಗಳನ್ನು ಗಳಿಸಿ ಸುದ್ದಿಯ ಸದ್ದು ಮಾಡಿತು.
ಅಡೆಲೆ ರೊಮನಾಸ್ಕಿ ನಿರ್ದೇಶನದ ಮೂನ್ಲೈಟ್ ಒಟ್ಟು ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಗಮನಸೆಳೆದಿದೆ.
ಮ್ಯಾನ್ಚೆಸ್ಟರ್ ಬೈ ದಿ ಸೀ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ಕಾಸೆ ಅಫ್ಲೆಕ್ ಮತ್ತು ಲಾಲಾ ಲ್ಯಾಂಡ್ ಚಿತ್ರದ ಮನೋಜ್ಞ ನಟನೆಗಾಗಿ ಎಮ್ಮಾ ಸ್ಟೋನ್ ಕ್ರಮವಾಗಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಪಡೆದುಕೊಂಡರು. ಲಾ ಲಾ ಲ್ಯಾಂಡ್ ಚಿತ್ರದ ನಿರ್ದೇಶನಕ್ಕಾಗಿ ಡಾಮಿನ್ ಚಾಜಾಲ್ ಶ್ರೇಷ್ಠ ನಿರ್ದೇಶಕ ಗೌರವಕ್ಕೆ ಪಾತ್ರರಾದರು. ಲಾ ಲಾ ಲ್ಯಾಂಡ್ಗೆ ಅತ್ಯುತ್ತಮ ಮೂಲಗೀತೆ , ಅತ್ಯುತ್ತಮ ಸಂಗೀತ, ಅತ್ಯುತ್ತಮ ನೃತ್ಯನಿರ್ದೇಶನ ಸೇರಿದಂತೆ ಒಟ್ಟು ಆರು ಪ್ರಶಸ್ತಿಗಳು ಲಭಿಸಿವೆ. ಭಾರತೀಯ ಮೂಲದ ಬ್ರಿಟಿಷ್ ನಟ ದೇವ್ ಪಟೇಲ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯಿಂದ ವಂಚಿತರಾದರು. ಜೂಟೋಪಿಯ ಅತ್ಯುತ್ತಮ ಅನಿಮೇಷನ್ ಚಿತ್ರ ಪ್ರಶಸ್ತಿ, ಪೈಪರ್ ಅತ್ಯುತ್ತಮ ಅನಿಮೇಷನ್ ಕಿರುಚಿತ್ರ ಪ್ರಶಸ್ತಿ ಗಳಿಸಿಕೊಂಡಿದೆ.
+ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಮಿಂಚಿದ ಪ್ರಿಯಾಂಕ:
Video: Priyanka Chopra at the Governors Ball #Oscars @priyankachopra pic.twitter.com/12fyow0YBr
— PRIYANKA DAILY (@PriyankaDaily) February 27, 2017
ಈಗಾಗಲೇ ಹಾಲಿವುಡ್ನಲ್ಲೂ ಜನಪ್ರಿಯತೆ ಗಳಿಸಿರುವ ಬಾಲಿವುಡ್ ನಟಿ ಮತ್ತು ಮಾಜಿ ಭುವನ ಸುಂದರಿ ಪ್ರಿಯಾಂಕ ಛೋಪ್ರ 89ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲೂ ಆಕಾಶದಲ್ಲಿರುವ ನಕ್ಷತ್ರದಂತೆ ಮಿನುಗಿದರು. ಶ್ವೇತ ವಸ್ತ್ರದಲ್ಲಿ ಕಂಗೊಳಿಸಿದ ಪಿಂಕಿಗೆ ಮುಖ್ಯ ಅತಿಥಿಯಾಗಿ ಕೆಂಪುಹಾಸಿನ ಸ್ವಾಗತ ನೀಡಲಾಯಿತು. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಅತ್ಯುತ್ತಮ ವಸ್ತ್ರ ಧರಿಸಿದ ಪ್ರಶಸ್ತಿಗೂ ಪಾತ್ರರಾಗಿದ್ದ ಪ್ರಿಯಾಂಕ ಹಾಲಿವುಡ್ನ ಬೆಡಗಿಯರಿಗೆ ಪೈಪೋಟಿ ನೀಡುವಂತೆ ಕಂಗೊಳಿಸಿದ್ದು ವಿಶೇಷ.
Priyanka Chopra Stuns In A Geometric Ralph & Russo Couture Gown At The 2017 #Oscars @priyankachoprahttps://t.co/VIDClYZ8EU pic.twitter.com/iVTwJV5cXz
— Priyanka-Chopra.us (@PriyankaNetwork) February 27, 2017
We can't get enough of @priyankachopra slayin' it at the #Oscars red carpet. pic.twitter.com/aDfi0fe8Rd
— Filmfare (@filmfare) February 27, 2017
Priyanka Chopra showing some futuristic chic. #Oscars #theWINNERSare pic.twitter.com/0WrtP64IMn
— Emma Chapple (@emma_chapple) February 27, 2017