ಕೋಲ್ಕತ್ತಾದ ಬುರ್ರಾ ಬಜಾರ್ ನಲ್ಲಿರುವ 100 ವರ್ಷ ಹಳೆಯ ಕಟ್ಟಡದಲ್ಲಿ ದಿಢೀರ್ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಕೋಲ್ಕತ್ತಾ, ಫೆ.28– ನೂರು ವರ್ಷದ ಹಳೆಯ ಕಟ್ಟಡದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಜ್ವಾಲೆಗೆ ಇಡೀ ಕಟ್ಟಡವೇ ಸುಟ್ಟು ಹೋಗಿರುವ ಘಟನೆ ಕೇಂದ್ರ ಕೋಲ್ಕತ್ತಾದ ಬುರ್ರಾ ಬಜಾರ್ ಹೋಲ್‍ಸೇಲ್ ಮಾರ್ಕೆಟ್‍ನಲ್ಲಿ ಸಂಭವಿಸಿದೆ.  ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಬೆಂಕಿಯ ಕೆನ್ನಾಲಿಗೆ ಜೋರಾಗಿದ್ದು, ಅದನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.  ಕಟ್ಟಡದಲ್ಲಿ ಹೇಗೆ ಬೆಂಕಿ ಬಿದ್ದಿತು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ಅಗ್ನಿಶಾಮಕ ಮೂಲಗಳು ತಿಳಿಸಿವೆ.

ಬೆಂಕಿಯ ಕೆನ್ನಾಲಿಗೆಗೆ ಕಟ್ಟಡ ಕುಸಿದಿದ್ದು, ಪೂರ್ತಿ ಕಟ್ಟಡ ಬೀಳುವ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.  ಕಿರಿದಾದ ಜಾಗದಲ್ಲಿ ಕಟ್ಟಡವಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದವರು ತೊಡಗಿದ್ದು, ಈ ನಡುವೆ ಬೆಂಕಿಯ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ.  ಕಾರ್ಯಾಚರಣೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಬಕ್ರೀ ಮಾರ್ಕೆಟ್ ಬಂದ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin