ಅಂಬಾಲ ದಲ್ಲಿ ಭೀಕರ ರಸ್ತೆ ಅಪಘಾತ, ಲಾರಿಗೆ ಟಾಟಾ ಸುಮೋ ಡಿಕ್ಕಿ, ಸ್ಥಳದಲ್ಲೇ 8 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Amabala-Accidnt

ಅಂಬಾಲ, ಮಾ.1– ಎದುರಿನಿಂದ ಬರುತ್ತಿದ್ದ ಲಾರಿಯೊಂದಕ್ಕೆ ಟಾಟಾ ಸುಮೋ ಡಿಕ್ಕಿ ಹೊಡೆದು ಅದರಲ್ಲಿದ್ದ ಪ್ರಯಾಣಿಕರಲ್ಲಿ ಎಂಟು ಮಂದಿ ಸ್ಥಳದಲ್ಲೇ ಸಾವನಪ್ಪಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ನಾರಾಯಣಗಡ ಎಂಬಲ್ಲಿ ಸಂಭವಿಸಿದೆ. ಉತ್ತರಪ್ರದೇಶದ ಮಿರ್ಜಾಪುರ್ ಮಹಾಲ್ಲಾದಲ್ಲಿ ನಡೆಯಲಿದ್ದ ವಿವಾಹ ಕಾರ್ಯಕ್ರವೊಂದರಲ್ಲಿ ಪಾಲ್ಗೊಳ್ಳಲು ನಾರಾಯಣಗಡದ ಮೋಲಿ ಎಂಬ ಹಳ್ಳಿಯಿಂದ ಸುಮೋದಲ್ಲಿ ತೆರಳುತ್ತಿದ್ದರು. ದುರದೃಷ್ಟವಶಾತ್ ಅವರುಗಳಿದ್ದ ಟಾಟಾ ಸುಮೋ ದಾಹರ್ ಅಂಬಲಿ ಎಂಬ ಪ್ರದೇಶದಲ್ಲಿ ದುರಂತಕ್ಕೀಡಾಯಿತು ಎಂದು ಪೊಲೀಸರು ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin