ಅತಿಯಾದ ಮದ್ಯ ಸೇವನೆಯಿಂದ ಯುವಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

drink
ಕುಣಿಗಲ್, ಫೆ.28-ಅತಿಯಾದ ಮದ್ಯ ಸೇವನೆಯಿಂದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕಾಲಿಯ್ಯ (22) ಮೃತಪಟ್ಟ ಯುವಕ.ಈತ ಪಟ್ಟಣದ ಹೊರವಲಯದ ಅಂಚೆಪಾಳ್ಯದ ದುರ್ಗಾ ಗ್ರಾನೈಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಸ್ನೇಹಿತ ಅಜಯ್ ಜತೆ ಅಲ್ಲಿಯೇ ರೂಮ್ ಮಾಡಿಕೊಂಡು ಇದ್ದರು.ಈತ ನಿನ್ನೆ ಅತಿಯಾದ ಮದ್ಯಪಾನ ಸೇವಿಸಿ ಮಲಗಿದ್ದಾನೆ. ಈ ವೇಳೆ ತೀವ್ರ ಅಸ್ವಸ್ಥನಾಗಿದ್ದು, ಕೂಡಲೇ ಆತನನ್ನು ಸ್ನೇಹಿತ ಅಜಯ್ ಪಟ್ಟಣದ ಸಪ್ತಗಿರಿ ನರ್ಸಿಂಗ್ ಹೋಂಗೆ ದಾಖಲು ಮಾಡಿದ್ದಾನೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin