ಈಗಲೂ ನಾನು ಡಬ್ಬಿಂಗ್‍ ವಿರೋಧಿಸುತ್ತೇನೆ : ಶಿವರಾಜ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Shivarajkumar-02

ಮಂಗಳೂರು,ಮಾ.1-ಕನ್ನಡದಲ್ಲಿಯೇ ಉತ್ತಮ ಚಿತ್ರಕಥೆಗಳಿದ್ದು ಡಬ್ಬಿಂಗ್‍ನ ಅವಶ್ಯಕತೆ ಇಲ್ಲ. ನಾನು ಡಬ್ಬಿಂಗ್‍ನ್ನು ವಿರೋಧಿಸುತ್ತೇನೆ ಎಂದು ಸ್ಯಾಂಡಲ್‍ವುಡ್‍ನ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ತಿಳಿಸಿದ್ದಾರೆ. ತುಳು ಚಿತ್ರವಾದ ಕಟ್ಟಪಾಡಿ ಕಟ್ಟಪ್ಪ ಚಿತ್ರದ ಸಾಂಗ್ ರೆಕಾರ್ಡಿಂಗ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಡಬ್ಬಿಂಗ್‍ನ್ನು ನಾನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದು, ಈಗಲೂ ನಾನು ವಿರೋಧಿಸುತ್ತೇನೆ. ಕನ್ನಡ ಚಿತ್ರವನ್ನು ನೋಡುವುದರ ಮೂಲಕ ಕನ್ನಡಿಗರನ್ನು ಬೆಂಬಲಿಸಬೇಕೆಂದರು.   ಎತ್ತಿನಹೊಳೆ ಯೋಜನೆಗೆ ಕನ್ನಡ ಚಿತ್ರರಂಗದಿಂದ ಸಂಪೂರ್ಣ ಬೆಂಬಲವಿದ್ದು , ಹೋರಾಟ ಅನಿವಾರ್ಯವಿದ್ದರೆ ಕರಾವಳಿ ಜನರ ಜೊತೆ ನಾವು ಇದ್ದೇವೆ ಎಂದು ಭರವಸೆ ನೀಡಿದರು.

ಡಬ್ಬಿಂಗ್ ವಿಚಾರವಾಗಿ ಹಲವು ದಿನಗಳಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು, ನಟ-ನಟಿಯರು ಸೇರಿದಂತೆ ಹಲವರು ಡಬ್ಬಿಂಗ್‍ನನ್ನು ವಿರೋಧಿಸುತ್ತಿದ್ದಾರೆ.   ಡಬ್ಬಿಂಗ್ ವಿಚಾರವಾಗಿ ಕಾನೂನು ತೊಡಕು ಉಂಟಾಗಿದ್ದು, ಕಲಾವಿದರು-ತಂತ್ರಜ್ಞರು ಭಾವನಾತ್ಮಕವಾಗಿ ಮುಂದಿನ ದಿನಗಳಲ್ಲಿ ಯಾವ ರೀತಿ ಕಾರ್ಯೋನ್ಮುಖವಾಗಿ ಡಬ್ಬಿಂಗ್‍ನ್ನು ತಡೆಗಟ್ಟಲು ಹೇಗೆ ಮುಂದಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin