ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾಯಿಸಿದ ಇಸ್ರೊ ಸಾಧನೆ ಕೇಳಿ ಟ್ರಂಪ್‍ಗೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ISRO-Trump

ವಾಷಿಂಗ್‍ಟನ್, ಮಾ.1- ಭಾರತವು ಏಕ ಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಗಗನಕ್ಕೆ ಉಡಾಯಿಸಿರುವುದನ್ನು ಕೇಳಿ ನನಗೆ ಆಘಾತವಾದಂತಾಗಿದೆ ಎಂದು ಹೇಳಿರುವ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇಂತಹ ವಿಷಯಗಳಲ್ಲಿ ಅಮೆರಿಕ ಹಿಂದೆ ಬೀಳುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದು ಎಂದು ಹೇಳಿದ್ದಾರೆ.  ಭಾರತವು ಒಂದೇ ಬಾರಿಗೆ ನೂರಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾಯಿಸುವಲ್ಲಿ ಯಶಸ್ವಿಯಾಗಿರುವುದನ್ನು ಅಂದು ಪತ್ರಿಕೆಗಳಲ್ಲಿ ಓದಿ ನನಗೆ ಆಘಾತವಾಯಿತು. ಇನ್ನೂ ಅಮೆರಿಕ ಈ ರೀತಿ ಹಿಂದೆ ಬಿದ್ದರೆ ಸಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮೊದಲ ಬಾರಿಗೆ ಅಧ್ಯಕ್ಷೀಯ ಭಾಷಣ ಮಾಡಿದ ಟ್ರಂಪ್, ಈ ಉದ್ಗಾರ ತೆಗೆದಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಫೆ.15ರಂದು 104 ಉಪಗ್ರಹಗಳನ್ನು ಏಕಕಾಲಕ್ಕೆ ಒಂದೇ ರಾಕೆಟ್ ಮೂಲಕ ಉಡಾಯಿಸುವಲ್ಲಿ ಯಶಸ್ವಿಯಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin