ಕ್ರೀಡಾಪಟುಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು

ಈ ಸುದ್ದಿಯನ್ನು ಶೇರ್ ಮಾಡಿ

21

ಬೈಲಹೊಂಗಲ,ಫೆ.28- ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಟ್ಟಣದ ಪುರಸಭೆಯ ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮಿಂಚಿ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಪುರಸಭೆಯ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಹೇಳಿದರು.ಅವರು ನಿನ್ನೆ ಪುರಸಭೆ ಸಾಮಾನ್ಯ ಸಭೆಯಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಮಿಂಚಿದ ಭಾಗ್ಯಶ್ರೀ ಕಾಪ್ರೋಲಿ, ಈಚೆಗೆ ಚೆನೈನಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ರಾಜಶ್ರೀ ಕಾಪ್ರೋಲಿ ಅವರನ್ನು ಸತ್ಕರಿಸಿ ಮಾತನಾಡಿ, ಸರಕಾರ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ವೈಯಕ್ತಿಕವಾಗಿ 10 ಸಾವಿರ ಸಹಾಯಧನ ನೀಡುತ್ತೇನೆ. ಪುರಸಭೆ ವತಿಯಿಂದ ಅವರನ್ನು ಪ್ರೋತ್ಸಾಹಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕ ಶಂಕರ ಉಡಿಕೇರಿ ಅವರನ್ನು ಸತ್ಕರಿಸಲಾಯಿತು. ಪುರಸಭೆಯ ಉಪಾಧ್ಯಕ್ಷ ಉಳವಪ್ಪ ಬಡ್ಡಿಮನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ರಿಝವಾನಾ ಬಾಗೇವಾಡಿ, ವಿರೋಧ ಪಕ್ಷದ ನಾಯಕ ಮಹಾಂತೇಶ ತುರಮರಿ, ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಮುಖ್ಯೋ ಪಾಧ್ಯಾಯ ರಮೇಶ ಪಾರಿಶ್ವಾಡ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin