ಬತ್ತಿ ಹೋದ ಜಲಾಶಯ, ಗೋಚರಿಸಿದ ಪ್ರಾಚೀನ ಚರ್ಚ್

ಈ ಸುದ್ದಿಯನ್ನು ಶೇರ್ ಮಾಡಿ
ಕರ್ನಾಟಕ ರಾಜ್ಯದಲ್ಲಿ ಭೀಕರ ಬರಗಾಲದಿಂದ ಜಲಾಶಯಗಳು, ನದಿ-ತೊರೆಗಳು ಮತ್ತು ಕೆರೆ-ಕಟ್ಟೆಗಳು ಬರಿದಾಗಿವೆ.ಮೆಕ್ಸಿಕೊದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿನ ಚಿಯಾಪಾಸ್‍ನಲ್ಲಿ ಕ್ಷಾಮದಿಂದಾಗಿ ಜಲಾಶಯದ ನೀರಿನ ಮಟ್ಟ ಬತ್ತಿ ಹೋಗಿದ್ದು, 16ನೇ ಶತಮಾನದ ಚರ್ಚ್ ಅವಶೇಷಗಳು ಗೋಚರಿಸುತ್ತಿವೆ. ಮೆಕ್ಸಿಕೊದ ಉತ್ತರ ಭಾಗದಲ್ಲಿರುವ ಚಿಯಾಪಾಸ್‍ನ ಗ್ರಿಜಲ್ವಾ ನದಿ ಪ್ರದೇಶದಲ್ಲಿ ತೀವ್ರ ಬರಗಾಲದಿಂದ ನೀರಿನ ಮಟ್ಟ ಕಡಿಮೆಯಾಗಿ ಸ್ಪೇನ್ ವಸಾಹತುಶಾಹಿಗಳು 16ನೇ ಶತಮಾನದಲ್ಲಿ ನಿರ್ಮಿಸಿದ್ದ ಪ್ರಾರ್ಥನಾ ಮಂದಿರ ಕಾಣಿಸುತ್ತಿದೆ. ಈ ಹಿಂದೆ 2002ರಲ್ಲಿ ಇದು ಗೋಚರಿಸಿತ್ತು. ಈ ವರ್ಷ ಜಲಾಶಯದ ನೀರಿನ ಮಟ್ಟ 80 ಅಡಿಗಳಿಗೆ ಕುಸಿದಿದ್ದು, 450 ವರ್ಷಗಳಷ್ಟು ಹಳೆಯದಾದ ಮೇಲ್ಛಾವಣಿ ಇಲ್ಲದ ಚರ್ಚ್ ಕಂಡುಬರುತ್ತದೆ. ಪರಿಣಿತರು ಹೇಳುವಂತೆ ಈ ವಿನ್ಯಾಸವನ್ನು ಈ ಪ್ರಾಂತ್ಯದ ಜೋಕ್ ನಿವಾಸಿಗಳಿಗೆ ಧರ್ಮ ಬೋಧನೆ ಮಾಡಲು ಆಗಮಿಸಿದ್ದ ಡೊಮಿನಿಕನ್ ಕ್ರೈಸ್ತ ಧರ್ಮ ಪ್ರಚಾರಕರಿಂದ 1564ರಲ್ಲಿ ನಿರ್ಮಿಸಲಾಗಿತ್ತು. 1966ರಲ್ಲಿ ಮಾಲ್‍ಪಾಸೋ ಅಣೆಕಟ್ಟು ನಿರ್ಮಿಸಿದ ನಂತರ ಈ ಪ್ರದೇಶ ಜಲಾವೃತವಾಯಿತು. ಜಲಾಶಯದಲ್ಲಿ ನೀರಿನ ಮಟ್ಟ ಇಳಿಮುಖವಾಗಿರುವುದರಿಂದ ಈಗ ಚರ್ಚ್ ಗೋಚರಿಸತೊಡಗಿದ್ದು, ಆಸಕ್ತ ವೀಕ್ಷಕರು ದೋಣಿಗಳಲ್ಲಿ ಆಗಮಿಸಿ ಈ ಆವಶೇಷಗಳನ್ನು ವೀಕ್ಷಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ನೀರಿನಲ್ಲಿ ಮುಚ್ಚಿ ಹೋಗಿದ್ದ ಈ ಪ್ರಾರ್ಥನಾ ಮಂದಿರ ಈಗ ಗೋಚರಿಸಿರುವುದಕ್ಕೆ ವೀಕ್ಷಕರಾದ ಅಮೆಲಿಯಾ ಜಿಮೆನೆಜ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಭೀಕರ ಬರಗಾಲದಿಂದ ಜಲಾಶಯಗಳು, ನದಿ-ತೊರೆಗಳು ಮತ್ತು ಕೆರೆ-ಕಟ್ಟೆಗಳು ಬರಿದಾಗಿವೆ.ಮೆಕ್ಸಿಕೊದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿನ ಚಿಯಾಪಾಸ್‍ನಲ್ಲಿ ಕ್ಷಾಮದಿಂದಾಗಿ ಜಲಾಶಯದ ನೀರಿನ ಮಟ್ಟ ಬತ್ತಿ ಹೋಗಿದ್ದು, 16ನೇ ಶತಮಾನದ ಚರ್ಚ್ ಅವಶೇಷಗಳು ಗೋಚರಿಸುತ್ತಿವೆ. ಮೆಕ್ಸಿಕೊದ ಉತ್ತರ ಭಾಗದಲ್ಲಿರುವ ಚಿಯಾಪಾಸ್‍ನ ಗ್ರಿಜಲ್ವಾ ನದಿ ಪ್ರದೇಶದಲ್ಲಿ ತೀವ್ರ ಬರಗಾಲದಿಂದ ನೀರಿನ ಮಟ್ಟ ಕಡಿಮೆಯಾಗಿ ಸ್ಪೇನ್ ವಸಾಹತುಶಾಹಿಗಳು 16ನೇ ಶತಮಾನದಲ್ಲಿ ನಿರ್ಮಿಸಿದ್ದ ಪ್ರಾರ್ಥನಾ ಮಂದಿರ ಕಾಣಿಸುತ್ತಿದೆ. ಈ ಹಿಂದೆ 2002ರಲ್ಲಿ ಇದು ಗೋಚರಿಸಿತ್ತು. ಈ ವರ್ಷ ಜಲಾಶಯದ ನೀರಿನ ಮಟ್ಟ 80 ಅಡಿಗಳಿಗೆ ಕುಸಿದಿದ್ದು, 450 ವರ್ಷಗಳಷ್ಟು ಹಳೆಯದಾದ ಮೇಲ್ಛಾವಣಿ ಇಲ್ಲದ ಚರ್ಚ್ ಕಂಡುಬರುತ್ತದೆ.ಪರಿಣಿತರು ಹೇಳುವಂತೆ ಈ ವಿನ್ಯಾಸವನ್ನು ಈ ಪ್ರಾಂತ್ಯದ ಜೋಕ್ ನಿವಾಸಿಗಳಿಗೆ ಧರ್ಮ ಬೋಧನೆ ಮಾಡಲು ಆಗಮಿಸಿದ್ದ ಡೊಮಿನಿಕನ್ ಕ್ರೈಸ್ತ ಧರ್ಮ ಪ್ರಚಾರಕರಿಂದ 1564ರಲ್ಲಿ ನಿರ್ಮಿಸಲಾಗಿತ್ತು. 1966ರಲ್ಲಿ ಮಾಲ್‍ಪಾಸೋ ಅಣೆಕಟ್ಟು ನಿರ್ಮಿಸಿದ ನಂತರ ಈ ಪ್ರದೇಶ ಜಲಾವೃತವಾಯಿತು. ಜಲಾಶಯದಲ್ಲಿ ನೀರಿನ ಮಟ್ಟ ಇಳಿಮುಖವಾಗಿರುವುದರಿಂದ ಈಗ ಚರ್ಚ್ ಗೋಚರಿಸತೊಡಗಿದ್ದು, ಆಸಕ್ತ ವೀಕ್ಷಕರು ದೋಣಿಗಳಲ್ಲಿ ಆಗಮಿಸಿ ಈ ಆವಶೇಷಗಳನ್ನು ವೀಕ್ಷಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ನೀರಿನಲ್ಲಿ ಮುಚ್ಚಿ ಹೋಗಿದ್ದ ಈ ಪ್ರಾರ್ಥನಾ ಮಂದಿರ ಈಗ ಗೋಚರಿಸಿರುವುದಕ್ಕೆ ವೀಕ್ಷಕರಾದ ಅಮೆಲಿಯಾ ಜಿಮೆನೆಜ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Facebook Comments

Sri Raghav

Admin