ಯಡಿಯೂರಪ್ಪ ದೇಶ ಕಂಡ ಬಹುದೊಡ್ಡ ಭ್ರಷ್ಟ : ಸಿದ್ದರಾಮಯ್ಯ ಎದುರೇಟು

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-vs-Siddaramaiah

ಬೆಂಗಳೂರು,ಮಾ1-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ದೇಶ ಕಂಡ ದೊಡ್ಡ ಭ್ರಷ್ಟರಾಗಿದ್ದು , ಇನ್ನೊಬ್ಬರ ಬಗ್ಗೆ ಏನು ಹೇಳುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿರುಗೇಟು ನೀಡಿದರು. ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ದ ಷಡ್ಯಂತ್ರ ನಡೆಸುತ್ತಿದ್ದು, ಹುರುಳಿಲ್ಲದ ಆರೋಪ ಮಾಡಲಾಗುತ್ತಿದೆ. ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರು ಡೈರಿ ನನ್ನದಲ್ಲ. ಸಹಿಯೂ ನನ್ನದಲ್ಲ , ಬರವಣಿಗೆಯೂ ನನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.   ಆದರೂ ನಕಲಿ ಡೈರಿ ಆಧಾರದ ಮೇಲೆ ಇಷ್ಟೆಲ್ಲಾ ಆರೋಪ ಮಾಡುತ್ತಿದ್ದಾರೆ. ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲು ಹಾಗೂ ಸರ್ಕಾರದ ಅಸ್ತಿತ್ವವನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಅವರದು ಎನ್ನಲಾದ ಡೈರಿಯ ಬಗ್ಗೆ ಬಿಜೆಪಿಯವರು ನಕಲಿ ಎನ್ನುತ್ತಾರೆ ಹಾಗಾದರೆ ಗೋವಿಂದರಾಜು ಅವರದು ಎನ್ನಲಾದ ಡೈರಿ ನಕಲಿ ಅಲ್ಲವೆ ಎಂದು ಪ್ರಶ್ನಿಸಿದರು.   ಉಕ್ಕಿನ ಸೇತುವೆ ವಿಚಾರದಲ್ಲಿ 65 ಕೋಟಿ ಕಿಕ್‍ಬ್ಯಾಕ್ ಬಗ್ಗೆ ತಮ್ಮ ವಿರುದ್ದವೇ ಬಿಎಸ್‍ವೈ ಆರೋಪ ಮಾಡಿದ್ದಾರಲ್ಲ ಎಂದಾಗ ಅವರೇ ದೊಡ್ಡ ಭ್ರಷ್ಟರಾಗಿದ್ದು , ಇನ್ನೊಬ್ಬರ ಬಗ್ಗೆ ಅವರು ಏನು ಹೇಳಲು ಸಾಧ್ಯ ಎಂದು ವಾಗ್ದಾಳಿ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin