ಶೀಘ್ರದಲ್ಲೇ ಮಾಯವಾಗಲಿದೆ ಟೀಮ್ ಇಂಡಿಯಾ ಜೆರ್ಸಿಯಲ್ಲಿರುವ ಸ್ಟಾರ್ ..!

ಈ ಸುದ್ದಿಯನ್ನು ಶೇರ್ ಮಾಡಿ

kohli

ನವದೆಹಲಿ,ಪೆ.28- ಸ್ಟಾರ್ ಇಂಡಿಯಾ ಕಂಪೆನಿಯು ಭಾರತ ಕ್ರಿಕೆಟ್ ತಂಡದ ಜೆರ್ಸಿಲ್ಲಿರುವ ಸ್ಟಾರ್ ಹಕ್ಕುಗಳನ್ನು ಮರುನವೀಕರಣ ಮಾಡಿಕೊಳ್ಳದ ಹಿನ್ನಲೆಯಲ್ಲಿ ಮಾರ್ಚ್ ಅಂತ್ಯದೊಳಗೆ ಒಪ್ಪಂದದ ಅವಧಿ ಮುಗಿಯಲಿದ್ದು , ಇದರಿಂದ ಬಿಸಿಸಿಐ ಹಾಗೂ ಸ್ಟಾರ್ ಕಂಪೆನಿಯ ಒಪ್ಪಂದಕ್ಕೆ ತೆರೆ ಬೀಳಲಿದೆ. ಸ್ಟಾರ್ ಇಂಡಿಯಾ ಕಂಪೆನಿಯು 2013 ರಲ್ಲಿ ಬಾರತ ತಂಡದ ಜೆರ್ಸಿಯಲ್ಲಿ ಸ್ಟಾರ್ ಚಿಹ್ನೆ ಮುದ್ರಿಸುವ ಹಕ್ಕು ಗಳನ್ನು ಪಡೆದಿತ್ತು . ಮುಂದಿನ ಮಾರ್ಚ್  ಅಂತ್ಯಕ್ಕೆ ಇದರ ಅವಧಿ ಮುಗಿಯುತ್ತಿರುವುದರಿಂದ ಮತ್ತೇ ಮರು ನವೀಕರಣ ಮಾಡಿಕೋಳ್ಳಲು ಕಂಪೆನಿ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ .  ಇಷ್ಟು ಅವಧಿ ಭಾರತ ತಂಡದ ಜೆರ್ಸಿಯಲ್ಲಿ ನಮ್ಮ ಕಂಪೆನಿಯ ಚಿಹ್ನೆ ಇದ್ದಿದ್ದು ಹೆಮ್ಮಯ ಸಂಗತಿ ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಅನಿಶ್ಚಿತ ವಾಗಿದೆ .ಈಗಾಗಲೇ ನಮ್ಮ ಆಡಳಿತ ಮಂಡಳಿ ಚಿಹ್ನೆ ಮರು ನವೀಕರಣ ಮಾಡದಂತೆ ತೀರ್ಮಾನಿಸಲಾಗಿದೆ ಎಂದು ಸ್ಟಾರ್ ಕಂಪೆನಿಯ ಸಿಇಓ ಉದಯ್ ಶಂಕರ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ .

ದ್ವಿಪಕ್ಷೀಯ ಸರಣಿಗಳಲ್ಲಿ ಒಂದು ಪಂಧ್ಯಕ್ಕೆ ಸ್ಟಾರ್ ಬಿಡ್ 19.2 ಮಿಲಿಯನ್ ಹಾಗೂ ಐಸಿಸಿ ಸರಣಿಗಳಲ್ಲಿ ಒಂದು ಪಂಧ್ಯಕ್ಕೆ 6.1 ಮಿಲಿಯನ್ ದುಬಾರಿ ಹಣ ಪಾವತಿಸಬೇಕಾಯಿತು. ಸ್ಟಾರ್ ಕಂಪೆನಿಗೂ ಮುನ್ನಾ ಸಹರ ಕಂಪೆನಿ ಕೂಡ ಬಿಡ್ ನಲ್ಲಿ ಭಾಗವಹಿಸಿತ್ತು .ಆದರೆ ಬಿಸಿಸಿಐ ಷರತ್ತುಗಳಿಗಳಿಗೆ ಬದ್ಧವಾಗದ ಕಾರಣ ಸಹರಾ ಕಂಪೆನಿ ತನ್ನ  ಒಡಂಬಡಿಕೆಯನ್ನು ಕಳೆದುಕೊಂಡ ನಂತರ ಸ್ಟಾರ್ ಇಂಡಿಯಾ ಬಿಸಿಸಿಐದೊಂದಿಗೆ ಸುದೀರ್ಘ ಒಪ್ಪಂದ ಮಾಡಿಕೊಂಡಿದ್ದು ,ಈ ಮಾರ್ಚ್ ಅಂತ್ಯಕ್ಕೆ ಮುಕ್ತಾಯ ವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin