ಶ್ರೀರಾಮುಲು-ಕರುಣಾಕರ್ ರೆಡ್ಡಿ ನಡುವಿನ ಮನಸ್ತಾಪ ಬಗೆಹರಿಸುವೆ : ಸೋಮಶೇಖರ್ ರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Somashekhar-Reddy-Sriramulu

ಬಳ್ಳಾರಿ,ಮಾ1-ಸಂಸದ ಶ್ರೀರಾಮುಲು ಮತ್ತು ಮಾಜಿ ಸಚಿವ ಕರುಣಾಕರ್ ರೆಡ್ಡಿ ನಡುವೆ ಉಂಟಾಗಿರುವ ಮನಸ್ತಾಪಪರಿಹರಿಸುವ ಹೊಣೆಯನ್ನು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ವಹಿಸಿಕೊಂಡಿದ್ದಾರೆ.   ಜನಾರ್ಧನ ರೆಡ್ಡಿ ಆಪ್ತ ಶ್ರೀರಾಮುಲು ಮತ್ತು ಸಹೋದರ ಕರುಣಾಕರ ರೆಡ್ಡಿ ನಡುವಿನ ವೈಮನಸ್ಸನ್ನು ದೂರ ಮಾಡಲು ಪ್ರಯತ್ನಿಸುವುದಾಗಿ ಸೋಮಶೇಖರ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.   ಸಂಸದ ಶ್ರೀರಾಮುಲು ಅವರು ನಮ್ಮ ಕುಟುಂಬದ ರಾಜಕೀಯ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅಂಥವರ ವಿರುದ್ದ ಪ್ರಕರಣ ದಾಖಲಿಸುವುದು ಸೂಕ್ತವಲ್ಲ. ಈ ಅಂಶವನ್ನು ಹಿರಿಯ ಸಹೋದರ ಕರುಣಾಕರ್ ರೆಡ್ಡಿ ಅವರ ಗಮನಕ್ಕೆ ತಂದು ಶ್ರೀರಾಮುಲು ವಿರುದ್ಧ ದಾಖಲಿಸಿರುವ ಪ್ರಕರಣವನ್ನು ವಾಪಸ್ ಪಡೆಯುವಂತೆ ಮನವೊಲಿಸುವುದಾಗಿ ಹೇಳಿದರು.

ಅದೇ ರೀತಿ ಕರುಣಾಕರ್ ರೆಡ್ಡಿ ವಿರುದ್ಧ ಜಾತಿ ನಿಂದನೆ ದಾಖಲು ಮಾಡಿರುವ ವ್ಯಕ್ತಿಗಳನ್ನು ಕರೆಸಿ ರಾಜಿಪಂಚಾಯ್ತಿ ನಡೆಸಿ ಆ ಪ್ರಕರಣವನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿದರು.
ಒಟ್ಟಾರೆ ಶ್ರೀರಾಮುಲು ಮತ್ತು ಕರುಣಾಕರ್ ರೆಡ್ಡಿ ನಡುವಿನ ವೈಮನಸ್ಸನ್ನು ದೂರ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಸೋಮಶೇಖರ್ ರೆಡ್ಡಿ ಭರವಸೆ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin