362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ರದ್ದತಿ ಕೈಬಿಟ್ಟು ನೇಮಕಾತಿಗೆ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

cabinet

ಬೆಂಗಳೂರು,ಮಾ.1-ಕಳೆದ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಕೆಎಟಿ ನೀಟಿರುವ ತೀರ್ಪನ್ನು ಸರ್ಕಾರ ಒಪ್ಪಿಕೊಂಡಿದ್ದು, ಇದರಿಂದ ಹುದ್ದೆಗಳ ಆಕಾಂಕ್ಷಿಗಳು ನಿಟ್ಟುಸಿರು ಬಿಟ್ಟಂತಾಗಿದೆ. ಕೆಎಟಿ ಆದೇಶ ವಿರುದ್ದ ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸಿದ್ದ ಸರ್ಕಾರ ಇಂದು ಸಚಿವ ಸಂಪುಟ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ ಮೇಲ್ಮನವಿಗೆ ಬದಲಾಗಿ ಕೆಎಟಿ ಆದೇಶ ಪಾಲಿಸಲು ನಿರ್ಧರಿಸಿದೆ.   ಸಂಪುಟ ಸಭೆಯ ನಂತರ ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, 2011ರ ಕೆಎಎಸ್ ನೇಮಕಾತಿಯ 362 ಹುದ್ದೆಗೆ ಸಂಬಂಧಿಸಿದಂತೆ ಚರ್ಚಿಸಲಾಗಿದ್ದು, ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆಯಲಾಗಿದೆ.

ಆಡಳಿತದ ಹಿತದೃಷ್ಟಿಯಿಂದ ಕೆಎಟಿ ಆದೇಶ ಪಾಲಿಸಲು ನಿರ್ಧರಿಸಲಾಗಿದೆ. ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಕೆಎಟಿ ನಿರಾಕರಿಸಿದೆ. ಬಾಧಿತರಾದ ಅಭ್ಯರ್ಥಿಗಳ ಬಗ್ಗೆ ಪೊಲೀಸ್ ಇಲಾಖೆ ನಡೆಸುವ ಪರಿಶೀಲನೆ ಮತ್ತು ತರಬೇತಿಯ ಎರಡು ವರ್ಷ ಅವಧಿಯಲ್ಲಿ ಪ್ರಶ್ನೆ ಮಾಡಲು ಅವಕಾಶವಿದೆ ಎಂದರು.   2016 ಅಕ್ಟೋಬರ್ 19ರಂದು ಕೆಎಟಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ಸಮ್ಮಿತಿಸಿದೆ. ಮೇಲ್ಮನವಿ ಸಲ್ಲಿಸುವುದನ್ನು ಕೈಬಿಟ್ಟಿದೆ ಎಂದು ಸ್ಪಷ್ಟಪಡಿಸಿದರು. ಕೈಗಾರಿಕೆ ಹಾಗೂ ಇತರೆ ಸಾರ್ವಜನಿಕ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವ ಜಮೀನು ಹಂಚಿಕೆಗೆ ಸಂಪುಟ ಒಪ್ಪಿಗೆ ನೀಡಿದೆ. 99 ವರ್ಷಗಳಿಗೆ ಬದಲಾಗಿ ಕೆಲವೊಂದು ಉದ್ದಿಮೆ ಹಾಗೂ ಸಂಸ್ಥೆಗಳಿಗೆ ಶುದ್ದ ಕ್ರಯ ಪತ್ರ ನೀಡಲು ಉದ್ದೇಶಲಾಗಿದೆ. ಇದು ಸರ್ಕಾರ ವಿವೇಚನೆಗೆ ಒಳಪಟ್ಟಿರುತ್ತದೆ.

99 ವರ್ಷಗಳ ಗುತ್ತಿಗೆಗೆ ಮೆಟ್ರೋ ರೈಲು ನಿಗಮ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂಪುಟ ಸಭೆ ತಿದ್ದುಪಡಿಗೆ ಒಪ್ಪಿದೆ. 2014 ಆಗಸ್ಟ್ 7ರಂದು, ಹೊರಡಿಸಿದ್ದ ಸರ್ಕಾರಿ ಅದೇಶವನ್ನು ಬದಲಾವಣೆ ಮಾಡಲಾಗಿದೆ.   ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದಿಮೆಗಳು, ಸಾರ್ವಜನಿಕ ಉದ್ದಿಮೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದ ಕಂಪನಿಗಳು ಏಕಘಟಕ ಸಂಕೀರ್ಣಗಳು, ವಸತಿ ಸಂಕೀರ್ಣಗಳಿಗೆ ಕೆಐಎಡಿಬಿ 99 ವರ್ಷಗಳಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರು ಮಾಡಿ ಹಂಚಿಕೆ ಮಾಡುತ್ತಿದ್ದು , ಇದಕ್ಕೆ ತಿದ್ದುಪಡಿ ತಂದು ಕೆಲವೊಂದು ಪ್ರಕರಣಗಳಲ್ಲಿ ಶುದ್ದ ಕ್ರಯ ಪತ್ರ ನೀಡುವುದಾಗಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin