ಉಗರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಮ್.ಆರ್. ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

7

ಸವದತ್ತಿ,ಮಾ.1- ತಾಲೂಕಿನ ಉಗರಗೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮಗಳಾದ ಹರ್ಲಾಪೂರ ಯಲ್ಲಮ್ಮನ ಗುಡ್ಡ, ತಾಂಡೆ, ಹೂಲಿ, ಗೊರವನಕೊಳ್ಳ ವಟ್ನಾಳ ಕುರವಿನಕೊಪ್ಪ ಕಟಮಳಿ, ಕ,ತಾಂಡೆಯಲ್ಲಿ 9 ತಿಂಗಳಿಂದ 15ವರ್ಷದೊಳಗಿನ ಒಟ್ಟು 5943 ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಚುಚ್ಚುಮದ್ದು ಹಾಕುವ ಗುರಿಯನ್ನು ನಿಗದಿಪಡಿಸಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಗ್ರಾಮಪಂಚಾಯತಿ ಅಧ್ಯಕ್ಷ ಪ್ರಲ್ಹಾದ ಕೆಳಗಡೆ ಉದ್ಘಾಟಿಸಿದರು. ತಾ.ಪಂ. ಸದಸ್ಯ ಪ್ರಕಾಶ ಲಮಾಣಿ, ಡಾ-ಜ್ಯೋತಿ ಬಸರಿ, ಡಾ. ಪ್ರತಿಭಾ ಚುಳಕಿಮಠ, ಎ.ವಾಯ್. ಮೂಗಬಸವ, ಆಯ್.ವಾಯ್. ಬಾರಕೇರ, ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin