ಕಾಂಗ್ರೆಸ್-ಬಿಜೆಪಿ ದೇಶದಲ್ಲಿ ಪಕ್ಷ ಕಟ್ಟಲಿಕ್ಕೆ ಬಡವರ ಹಣ ಲೂಟಿ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು, ಮಾ.2- ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದ್ದರೂ ರಾಜ್ಯ ಸರ್ಕಾರ ಬರದ ಭೀಕರತೆ ಅರಿಯದೇ ಜನರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಆರೋಪಿಸಿದ್ದಾರೆ. ನಗರದ 2 ವಾರ್ಡ್‍ನಲ್ಲಿ 27 ವಾರ್ಡ್‍ಗಳ ಜೆಡಿಎಸ್ ಘಟಕದ ಪದಾಧಿಕಾರಿಗಳನ್ನು ನೇಮಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿ ದೇಶದಲ್ಲಿ ಪಕ್ಷ ಕಟ್ಟಲಿಕ್ಕೆ ಬಡವರ ಹಣ ಲೂಟಿ ಮಾಡುತ್ತಿವೆ. ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಹೈ-ಕಮಾಂಡ್‍ಗೆ ಕಪ್ಪಕಾಣಿಕೆ ನೀಡಿರುವ ಬಗ್ಗೆ ನಡೆಯುತ್ತಿರುವ ಹಗರಣವೇ ಇದಕೆ ಸಾಕ್ಷಿ ಎಂದರು.

ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಇತ್ತೀಚೆಗೆ ನೋಟ್ ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು, ರೈತರು, ಸಣ್ಣ ಉದ್ದೆಮೆದಾರರು, ಅದರಲ್ಲೂ ಗ್ರಾಮಾಂತರ ಜನತೆ ತತ್ತರಿಸಿ ಹೋಗಿದ್ದಾರೆ.  ಶ್ರೀಮಂತರಿಗೆ ಇದರಿಂದ ತೊಂದರೆಯಾಗಿಲ್ಲಾ ಇದನ್ನು ಸರಿಪಡಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು ಮಳೆ ಇಲ್ಲದೇ ಕೆರೆ ಕಟ್ಟೆ, ಡ್ಯಾಂಗಳು ನೀರಿಲ್ಲದೇ ಪರಿಸ್ಥಿತಿ ಹದಗೆಟ್ಟಿದ್ದು ಸೆಪ್ಟಂಬರ್ ತನಕ ಕಠಿಣ ಪರಿಸ್ಥಿತಿ ಎದುರಾಗಲಿದ್ದು ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಗಮನ ಹರಿಸದೇ ಪಕ್ಷದಲ್ಲಿ ಅಂತರಿಕ ಜಗಳ, ಆಡಳಿತ ವ್ಯವಸ್ಥೆ ಕುಸಿತ ಬೇಜಾಬ್ಧಾರಿ ಹೇಳಿಕೆ ಉಢಾಫೆ ದೋರಣೆಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರು ಜನರ ಬಳಿ ಹೋಗಿ ಸಂಕಷ್ಠಕೊಳಗಾದ ರೈತರಿಗೆ ಜನತೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತಂದರೆ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಈಗಾಗಲೇ ಘೋಷಿಸಲಾಗಿದೆ ಎಂದು ಹೇಳಿದರು.

ಕಳಲೆ ಕೇಶವಮೂರ್ತಿ ಪಕ್ಷದಿಂದ 2 ಬಾರಿ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋತ್ತಿದ್ದರೂ ಪಕ್ಷ ಅಧಿಕಾರಕ್ಕೆ ಬಂದಾಗ ಇವರನ್ನು ಎಂಎಲ್‍ಸಿ ಮಾಡಲು ಜೆಡಿಎಸ್ ನಾಯಕರು ವಿಶೇಷ ಕಾಳಜಿವಹಿಸಿದ್ದರು. ಆತುರದಿಂದ ಪಕ್ಷವನ್ನು ತೊರೆದು ಹೋಗಿದ್ದಾರೆ ಎಂದು ಹೇಳಿದರು.ಉತ್ಸಾಹದಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬೆಳವಾಡಿ ಶಿವಕುಮಾರಸ್ವಾಮಿರವರಿಗೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು. 2 ವಾರ್ಡ್‍ನ ಅಧ್ಯಕ್ಷರಾಗಿ ನಂಜುಂಡಸ್ವಾಮಿ(ಅಂಬಿ), ಮಹಿಳಾ ಘಟಕದ ಅಧ್ಯಕ್ಷರಾಗಿ ಆಶಾ ತಿಮ್ಮೇಗೌಡ ಆಯ್ಕೆಯಾದರು.
ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ತಾಲ್ಲೂಕು ಅಧ್ಯಕ್ಷ ಆರ್.ವಿ. ಮಹದೇವಸ್ವಾಮಿ, ಜೆಡಿಎಸ್ ಮುಖಂಡ ಶಿವಕುಮಾರಸ್ವಾಮಿ, ಜಿಪಂ ಸದಸ್ಯ ಮಾದೇಗೌಡ, ನಗರಾಧ್ಯಕ್ಷ ಭಾಸ್ಕರ್ ಗೌಡ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಧಾ ಶಿವಕುಮಾರ್, ಆಶೋಕಪುರಂ ಬಸವರಾಜು ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin