ಕುಂಬ್ಳೆ ಪ್ರತಿಷ್ಠೆಗೆ ಸವಾಲಾಗಿದೆ ದ್ವಿತೀಯ ಟೆಸ್ಟ್ ಪಂದ್ಯ

ಈ ಸುದ್ದಿಯನ್ನು ಶೇರ್ ಮಾಡಿ

Kuble-and-akohli

ಬೆಂಗಳೂರು,ಮಾ.2-ನಗರದ ಚಿನ್ನಸ್ವಾಮಿ ಅಂಗಳದಲ್ಲಿ ಶನಿವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ದದ ದ್ವಿತೀಯ ಟೆಸ್ಟ್ ಪಂದ್ಯ ಭಾರತ ತಂಡದ ಮುಖ್ಯ ತರಬೇತುದಾರ ಅನಿಲ್‍ಕುಂಬ್ಳೆ ಅವರ ಪ್ರತಿಷ್ಠೆಗೆ ಸವಾಲಾಗಿದೆ. ಕರ್ನಾಟಕದವರೇ ಆದ ಅನಿಲ್‍ಕುಂಬ್ಳೆ ಆಡಿ ಬೆಳೆದ ಚಿನ್ನಸ್ವಾಮಿ ಅಂಗಳದ ಬಗ್ಗೆ ಸಾಕಷ್ಟು ಅನುಭವವಿದೆ. ಹಾಗಾಗಿ ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕು. ಆದ್ದರಿಂದ ಈ ಪಂದ್ಯ ಕುಂಬ್ಳೆ ಪಾಲಿಗೆ ಸವಾಲಾಗಿ ಪರಿಣಮಿಸಿದೆ.  ಪುಣೆ ಅಂಗಳದ ಮೊದಲ ಟೆಸ್ಟ್‍ನಲ್ಲಿ ಹೀನಾಯ ಸೋಲಿನ ಕಹಿ  ಅನುಭವಿಸಿದ ಭಾರತ, ದ್ವಿತೀಯ ಟೆಸ್ಟ್ ಪಂದ್ಯದ ಗೆಲುವಿಗಾಗಿ ಇಂದು ಕೂಡ ಕಠಿಣ ತಾಲೀಮು ನಡೆಸಿದ್ದು, ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಹೆಚ್ಚಿನ ಪರಿಪಕ್ವತೆಗಾಗಿ ಭಾರತ ತಂಡದ ಎಲ್ಲ ಸದಸ್ಯರು ದೀರ್ಘಕಾಲ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಕೊಹ್ಲಿ ಫಾರ್ಮ್‍ಗೆ ಮರಳುವ ಅನಿವಾರ್ಯತೆ:

ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‍ಗಳಲ್ಲಿ ಕ್ರಮವಾಗಿ 0 ಹಾಗೂ 13 ರನ್ ಗಳಿಸಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದ ಕೊಹ್ಲಿ, ಈ ಪಂದ್ಯದಲ್ಲಿ ಹೆಚ್ಚು ರನ್ ಗಳಿಸುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಅಂಗಳದ ಬಿ ಮೈದಾನದ ಎಲ್ಲ ನೆಟ್ಸ್‍ಗಳಲ್ಲೂ ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin