ಮಾನವೀಯತೆ ಪೊಲೀಸರು ಇದ್ದಾರೆ ಎಂಬುದಕ್ಕೆ ಈ ಉಪ ನಿರೀಕ್ಷಕರು ಸಾಕ್ಷಿ

ಈ ಸುದ್ದಿಯನ್ನು ಶೇರ್ ಮಾಡಿ

bagepalli

ಬಾಗೇಪಲ್ಲಿ, ಮಾ.2- ಪೊಲೀಸರಿಗೆ ಕರುಣೆ ಇಲ್ಲ ಅಂತಾರೆ. ಅದು ಎಷ್ಟು ನಿಜಾನಾ, ಸುಳ್ಳು ಗೊತ್ತಿಲ್ಲ, ಎಲ್ಲಾ ಪೊಲೀಸರು ಈ ರೀತಿ ಇರೋಲ್ಲ ರೀ… ಮಾನವೀಯತೆ ಇರುವ ಪೊಲೀಸರು ಇದ್ದಾರೆ ಎಂಬುದಕ್ಕೆ ಪಟ್ಟಣದ ಉಪ ನಿರೀಕ್ಷಕರೊಬ್ಬರು ಸಾಕ್ಷಿಯಾಗಿದ್ದಾರೆ.ಸಂಚಾರಿ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ರೈತನ ಬಳಿ ಹಣ ಇಲ್ಲದೆ ಇದ್ದಾಗ ದಂಡ ವಿಧಿಸಿದ ಆರಕ್ಷಕರೇ ತಮ್ಮ ಸ್ವಂತ ಹಣ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ಇತ್ತೀಚೆಗೆ ಹಲವಾರು ಅಪಘಾತಗಳು ಸಂಭಂವಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪಟ್ಟಣ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ವೆಂಕಟೇಶ್‍ರವರು ಸಂಚಾರಿ ನಿಯಮ ಉಲ್ಲಂಘಿಸಿ ಚಾಲನೆ ಮಾಡುತ್ತಿದ್ದ ಚಾಲಕರಿಗೆ ದಂಡ ವಿಧಿಸುತ್ತಿದ್ದರು.

ಈ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ರೈತನ ದ್ವಿಚಕ್ರ ವಾಹನ ನಿಲ್ಲಿಸಿದ ಪೊಲೀಸರು 300 ರೂ. ದಂಡ ವಿಧಿಸಿದ್ದಾರೆ. ಈ ಸಂದರ್ಭದಲ್ಲಿ ಹಣವಿಲ್ಲ ರೈತ ಆರಕ್ಷಕ ಉಪನಿರೀಕ್ಷಕರಾದ ವೆಂಕಟೇಶ್‍ರವರ ಬಳಿ ಹೋಗಿ ನಾನು ರೈತ ನನ್ನ ಬಳಿ ಹಣವಿಲ್ಲ, ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಕ್ಷಮೆ ಇರಲಿ ಎಂದ. ಈಗಾಗಲೇ ಪೊಲೀಸರು 300 ರೂ. ದಂಡ ವಿಧಿಸಿದ್ದರು. ರೈತನ ಮಾತಿಗೆ ಮರುಗಿ ಆರಕ್ಷಕ ಉಪ ನಿರೀಕ್ಷಕರು ತಮ್ಮ ಸ್ವಂತ ಹಣವನ್ನು ದಂಡವಾಗಿ ಪಾವತಿಸಿದರು. ಈ ಸಂದರ್ಭಗಳಲ್ಲಿ ಅಲ್ಲಿ ನೆರೆದಿದ್ದ ಸಾರ್ವಜನಿಕರು ಆರಕ್ಷಕ ಉಪ ನಿರೀಕ್ಷಕರ ರೈತರ ಬಗೆಗಿನ ಕಾಳಜಿಗೆ ಪ್ರಶಂಸೆ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin