HDFC,ICICI,AXIS ಬ್ಯಾಂಕ್’ಗಳಲ್ಲಿ ನಿಮ್ಮ ಅಕೌಂಟ್ ಇದೆಯಾ..? ಹಾಗಾದರೆ ಇದನ್ನೊಮ್ಮೆ ಓದಿಬಿಡಿ

ಈ ಸುದ್ದಿಯನ್ನು ಶೇರ್ ಮಾಡಿ

Bank--01

ನವದೆಹಲಿ, ಮಾ. 2 :  ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಗಳಾದ ಎಚ್ ಡಿಎಫ್ ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಗಳು ಗ್ರಾಹಕರಿಗೆ ಶಾಕ್ ನೀಡಿದ್ದು 4 ಬಾರಿ ಮಾತ್ರ ಉಚಿತವಾಗಿ ಹಣ ವಿನಿಮಯ ಹಾಗೂ ಎಟಿಎಂಗಳಿಂದ ಹಣವನ್ನು ವಿತ್ ಡ್ರಾ ಮಾಡಲು ಅವಕಾಶವನ್ನು ನೀಡಿದೆ. 5ನೇ ನಗದು ವಹಿವಾಟಿನ ಮೇಲೆ ಖಾಸಗಿ ಬ್ಯಾಂಕ್ ಗಳು ರೂ.150 ಶುಲ್ಕವನ್ನು ವಿಧಿಸಲಿವೆ. ನಗದು ರಹತ ವಹಿವಾಟು ವ್ಯವಸ್ಥೆ ಜಾರಿಯ ಕೇಂದ್ರ ಸರ್ಕಾರದ ಆಂದೋಲನಕ್ಕೆ ಸಾಥ್ ನೀಡಿರುವ ಕೆಲ ಖಾಸಗಿ ಬ್ಯಾಂಕ್ ಗಳ ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಿವೆ.  ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಖಾಸಗಿ ವಲಯದ ಹೆಚ್’ಡಿಎಫ್’ಸಿ, ಎಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಗಳು ಮಾರ್ಚ್ 1 ರಿಂದಲೇ ಜಾರಿಗೆ ಬರುವಂತೆ ನಗದು ವ್ಯವಹಾರದ ಮೇಲೆ ಈ ಹೊಸ ನಿಯಮವನ್ನು ಹೇರಿದೆ.

ಈ ನಿಯಮ ಉಳಿತಾಯ ಮತ್ತು ವೇತನ ಖಾತೆಗಳಿಗೂ ಅನ್ವಯವಾಗಲಿದೆ. ಇದಲ್ಲದೇ ಮೂರನೇ ವ್ಯಕ್ತಿಯೊಂದಿಗೆ ನಡೆಸುವ ನಗದು ವ್ಯವಹಾರಕ್ಕೆ ದಿನವೊಂದಕ್ಕೆ ಗರಿಷ್ಠ ರೂ.25000ದ ಮಿತಿ ಹಾಕಲಾಗಿದೆ. ಇನ್ನು ಐಸಿಐಸಿಐ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಹೋರ್ ಬ್ರ್ಯಾಂಚ್ ನಲ್ಲಿ ಮೊದರ ನಾಲ್ಕು ನಗದು ವಹಿವಾಟು ಉಚಿತವಾಗಿರಲಿದ್ದು, ನಂತರದ ಪ್ರತಿ ರೂ.1000 ವಹಿವಾಟಿಗೆ ರೂ.5 ರಂತೆ ಕನಿಷ್ಟ ರೂ.150 ದಂಡವನ್ನು ವಿಧಿಸಲಾಗುತ್ತದೆ. ಆದರೆ, ಬೇರೆ ಶಾಖೆಗಳಲ್ಲಿ ಮೊದಹ ವಹಿವಾಟು ಮಾತ್ರವೇ ಉಚಿತವಾಗಿರಲಿದೆ.

ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಬುಧವಾರವೇ (ಮಾ. 1) ಎಚ್ ಡಿಎಫ್ ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಗಳು ತಮ್ಮೆಲ್ಲಾ ಶಾಖೆಗಳಿಗೆ ಈ ಸುತ್ತೋಲೆ ಹೊರಡಿಸಿದ್ದು, ಮಾರ್ಚ್ 1ರಿಂದಲೇ ಇದು ಅಧಿಕೃತವಾಗಿ ಜಾರಿಗೆ ಬಂದಿದೆ.  ಡಿಬಿಟ್ ಕಾರ್ಡುಗಳ ಮೂಲಕ ಅಥವಾ ಬ್ಯಾಂಕುಗಳಲ್ಲಿ ವಿತ್ ಡ್ರಾ ಫಾರ್ಮ್ ತುಂಬುವ ಮೂಲಕ ಹಣ ಬಿಡಿಸಿಕೊಳ್ಳುವುದಾದಲ್ಲಿ ಪ್ರತಿ ತಿಂಗಳು ನಾಲ್ಕು ಬಾರಿ ಮಾತ್ರ ಶುಲ್ಕ ರಹಿತವಾಗಿ ಹಣ ಪಡೆಯಬಹುದು. ಆದರೆ, ಯಾವುದೇ ತಿಂಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿಕೊಳ್ಳುವುದಾದರೆ ಪ್ರತಿಯೊಂದು ಹಣ ಹಿಂಪಡೆಯುವ ಪ್ರಕ್ರಿಯೆಗೂ ಆಯಾ ವ್ಯವಹಾರಗಳಲ್ಲಿ ಹಿಂಪಡೆದ ಹಣದ ಮೊತ್ತದ ಮೇಲೆ ಕನಿಷ್ಠ 5ರಿಂದ 150 ರೂ. ಶುಲ್ಕ ಅನ್ವಯವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin