ನೋಟ್ ಬ್ಯಾನ್ ಎಫೆಕ್ಟ್’ನಿಂದ ಸಂಕಷ್ಟಕ್ಕೆ ಸಿಲುಕಿದ ತಿರುಪತಿ ತಿಮ್ಮಪ್ಪ..!

ಈ ಸುದ್ದಿಯನ್ನು ಶೇರ್ ಮಾಡಿ

Tirupathi--01

ತಿರುಪತಿ, ಮಾ.3- ರದ್ದಾಗಿರುವ 500, 1000 ಮುಖಬೆಲೆಯ ನೋಟುಗಳಿಂದ ತಿರುಪತಿ ತಿಮ್ಮಪ್ಪ ಸಂಕಷ್ಟಕ್ಕೀಡಾಗಿದ್ದಾನೆ. ಕಾಣಿಕೆ ಹುಂಡಿಗೆ ಬಿದ್ದ ಸುಮಾರು 4 ಕೋಟಿ ಹಳೆಯ ನೋಟುಗಳ ವಿನಿಮಯಕ್ಕೆ ವಿನಾಯ್ತಿ ನೀಡಬೇಕೆಂದು ಟಿಟಿಡಿ ಆಡಳಿತ ಮಂಡಳಿ ಕೇಂದ್ರ ಸರ್ಕಾರ ಹಾಗೂ ಆರ್‍ಬಿಐಗೆ ಪತ್ರ ಬರೆದಿದ್ದು, ಇನ್ನೂ ಉತ್ತರ ಬಂದಿಲ್ಲ.  500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಲು ಕಳೆದ ಡಿಸೆಂಬರ್ ವರೆಗೆ ಅವಕಾಶ ನೀಡಿದ್ದು, ನಂತರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಆದೇಶ ನೀಡಿತ್ತು.

ಆದರೆ, ತಿಮ್ಮಪ್ಪನ ಸನ್ನಿಧಿಗೆ ಜನವರಿ, ಫೆಬ್ರವರಿಯಲ್ಲಿ ಬಂದ ಭಕ್ತರು ಕಾಣಿಕೆ ಸಲ್ಲಿಸಿದ್ದು, ಇದರಲ್ಲಿ 500ರೂ ಹಾಗೂ 1000 ಮುಖ ಬೆಲೆಯ ಬರೋಬ್ಬರಿ 4 ಕೋಟಿ ರೂ. ಸಂಗ್ರಹವಾಗಿದೆ.
ಈ ಹಳೆಯ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಬೇಕೆಂದು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿತ್ತಾದರೂ ಈವರೆಗೆ ಯಾವುದೇ ಉತ್ತರ ಬಂದಿಲ್ಲ.  ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಹಳೆಯ ನೋಟುಗಳ ರಾಶಿ ರಾಶಿ ಹಣ ಹುಂಡಿಗೆ ಬಿದ್ದಿದೆ. ಅತ್ತ ಬ್ಯಾಂಕ್‍ನವರು ತೆಗೆದುಕೊಳ್ಳುವಂತಿಲ್ಲ. ಇತ್ತ ಆರ್‍ಬಿಐನವರು ಬದಲಾವಣೆ ಮಾಡಿಕೊಡುತ್ತಿಲ್ಲ. ಹಾಗಾಗಿ ಹಣ ಹಾಗೆಯೇ ಉಳಿದು ತಿಮ್ಮಪ್ಪ ಸಂಕಷ್ಟಕ್ಕೀಡಾಗಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin