ಬೈಕ್‍ಗೆ ಕಾರು ಡಿಕ್ಕಿ : ಸ್ಥಳದಲ್ಲೇ ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

deadly--accident
ಬೆಳಗಾವಿ, ಮಾ.3- ಸಾವಿಗೆ ಹೋಗಿ ವಾಪಸಾಗುತ್ತಿದ್ದ ಮೂವರು ಮಾರ್ಗಮಧ್ಯೆ ಸಂಭವಿಸಿದ ಅಪಘಾತದಿಂದ ಮಸಣ ಸೇರಿದ ಘಟನೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.
ಚಿಕ್ಕೋಡಿ ವಾಸಿ ಮುಜಾಹಿದ್ ದೇಸಾಯಿ (34), ಕರೋಶಿ ನಿವಾಸಿಗಳಾದ ಅಬ್ದುಲ್ ರಜಾಕ್ ಪಟೇಲ್ (33), ಕಲಿಮುನ ಪಟೇಲ್ (55) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.
ಸಾವಿಗೆ ತೆರಳಿದ್ದ ಮೂವರು ಕಾರ್ಯ ಮುಗಿಸಿಕೊಂಡು ತಡರಾತ್ರಿ ಒಂದೇ ಬೈಕ್‍ನಲ್ಲಿ ಚಿಕ್ಕೋಡಿಗೆ ಹೊರಟಿದ್ದಾರೆ.ಸುಮಾರು ಒಂದು ಗಂಟೆ ಸಮಯದಲ್ಲಿ ಹುಕ್ಕೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬರುವಾಗ ಚಿಕಾಲಗುಡ್ಡ ಗ್ರಾಮದ ಬಳಿ ಬೈಕ್‍ಗೆ ಸ್ವಿಫ್ಟ್‍ಕಾರು ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ಸಂಬಂಧ ಯಮಕನಮರಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin