ಲಿಮ್ಕಾ ದಾಖಲೆ ಸೇರಿದ ದೆಹಲಿ ಮೆಟ್ರೋ

ಈ ಸುದ್ದಿಯನ್ನು ಶೇರ್ ಮಾಡಿ

Limca-025

ನವದೆಹಲಿ, ಮಾ.3- ಒಂದು ತಿಂಗಳಲ್ಲಿ 200ಸರಕಟ್ಟುಗಳನ್ನು ಅಳವಡಿಸುವ ಮೂಲಕ ದೆಹಲಿ ಮೆಟ್ರೋ ಲಿಮ್ಕಾ ದಾಖಲೆ ನಿರ್ಮಿಸಿದೆ. ನೊಯಿಡಾ, ಗ್ರೇಟರ್ ನೊಯಿಡಾ ಕಾರಿಡಾರ್‍ನಲ್ಲಿ ಈ ಸಾಧನೆ ಮಾಡಿದೆ. ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ವತಿಯಿಂದ ಬಿಎಂಆರ್‍ಸಿ ಮುಖ್ಯಸ್ಥ ಮಂಗುಸಿಂಗ್ ಅವರಿಗೆ ಅಧಿಕೃತ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಯಿತು. ಮೊದಲು ಮೆಟ್ರೋ ಕಾರಿಡಾರ್‍ಗಳ ಪೈಕಿ ಒಂದು ತಿಂಗಳಲ್ಲಿ ಅತಿ ಹೆಚ್ಚು ಗಿರ್ಡರ್‍ಗಳನ್ನು ಲಾಂಛ್ ಮಾಡಿರುವುದು ಇದೇ ಮೊದಲು. ಸರಕಟ್ಟುಗಳನ್ನು ತರಲು 6 ವಿಶೇಷ ನೂಕು ಗಾಡಿಗಳು ಹಾಗೂ 6ಕ್ರೇನ್‍ಗಳನ್ನು ಬಳಸಿಕೊಳ್ಳಲಾಗಿದೆ. ನೊಯಿಡಾ-ಗ್ರೇಟರ್ ನೊಯಿಡಾ ನಡುವೆ 30 ಕಿ.ಮೀ. ದೂರದ ಕಾರಿಡಾರ್‍ನಲ್ಲಿ 2002 ಸರಕಟ್ಟುಗಳನ್ನು ಅಳವಡಿಸಲಾಗುತ್ತಿದೆ. ಈ ಮಾರ್ಗದಲ್ಲಿ 21 ನಿಲ್ದಾಣಗಳು ಬರಲಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin