ಹೆಚ್1ಎನ್1ಗೆ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ  ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

kr-pete

ಕೆ.ಆರ್.ಪೇಟೆ,ಮಾ.3- ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಮಾರಕ ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಕತ್ತರಘಟ್ಟ ಗ್ರಾಮದ ವೆಂಕಟೇಶ್ ಅವರ ಪತ್ನಿ ಸುಮ(28) ಮೃತಪಟ್ಟ ನತದೃಷ್ಟೆ.

ಘಟನೆ ವಿವರ : ಸುಮ ಕೆಮ್ಮು, ನೆಗಡಿ ಮತ್ತಿತರ ಸಾಮಾನ್ಯ ಸಮಸ್ಯೆಯಿಂದ ಬಳಲುತ್ತಿದ್ದು ಪಟ್ಟಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಮಸ್ಯೆ ಉಲ್ಬಣಗೊಂಡಾಗ ಸುಮ ಅವರನ್ನು ಫೆ.20ರಂದು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಸುಮ ಅವರನ್ನು ವೈದ್ಯರು ಪರೀಕ್ಷಿಸಿದಾಗ ಹೆಚ್1ಎನ್1 ಇರುವುದು ಬೆಳಕಿಗೆ ಬಂದಿದೆ. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಿದ್ದ ಸುಮಾ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಮುಂಜಾನೆ ಸಾವನ್ನಪ್ಪಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.ಮೃತರಿಗೆ 8 ವರ್ಷದ ಗಂಡು ಮತ್ತು 6 ವರ್ಷದ ಒಂದು ಹೆಣ್ಣು ಮಗುವಿದೆ.

ವೈದ್ಯರ ಭೇಟಿ : ಹೆಚ್1 ಎನ್1 ರೋಗದಿಂದ ಕತ್ತರಘಟ್ಟ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬಳು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ತಾಲೂಕು ಆಡಳಿತ ವ್ಯದ್ಯಾಧಿಕಾರಿ ಡಾ. ಸಿ.ಎ.ಅರವಿಂದ್ ಸ್ಥಳಕ್ಕೆ ಭೇಟಿ  ನೀಡಿ ಮಾಹಿತಿ ಪಡೆದರು.ಹೆಚ್1 ಎನ್1 ರೋಗದಿಂದ ಸುಮ ಬಳಲುತ್ತಿದ್ದರೂ ಆಕೆಯ ಮನೆಯವರ್ಯಾರಿಗೂ ರೋಗ ಹರಡಿಲ್ಲ. ಕತ್ತರಘಟ್ಟ ಗ್ರಾಮ ಸೇರಿದಂತೆ ತಾಲೂಕಿನ ಯಾವುದೇ ಗ್ರಾಮಗಳಲ್ಲೂ ಹೆಚ್1 ಎನ್1 ರೋಗದ ಬಗ್ಗೆ ವರದಿಯಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin