ಅಮೃತಬಳ್ಳಿ ಕಷಾಯ

ಈ ಸುದ್ದಿಯನ್ನು ಶೇರ್ ಮಾಡಿ
ಅಮೃತಾದಿ ಕಷಾಯ ಮಧುಮೇಹ ರೋಗವನ್ನು ಬಹಳ ಸುಲಭವಾಗಿ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾದ ಒಂದು ಉತ್ತಮ ಔಷಧ- ಅಮೃತಬಳ್ಳಿಯ ಕಷಾಯ, ಅಮೃತಬಳ್ಳಿ, ನೇರಳೆ ಚಕ್ಕೆ, ನೆಲ್ಲಿ ಚಟ್ಟು, ಸೊಗಡೆ ಬೇರು ಮತ್ತು ಜ್ಯೇಷ್ಠ ಮಧು ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಒಣಗಿಸಿ ದಪ್ಪ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಒಂದು ಚಮಚ ಪುಡಿಯನ್ನು ಎರಡು ಲೋಟ ನೀರಿನಲ್ಲಿ ಹಾಕಿ, ಚೆನ್ನಾಗಿ ಕುದಿಸಿ, ಹಿಂಗಿಸಿ ಒಂದು ಲೋಟ ನೀರು ಉಳಿಯುವಂತೆ ಕಷಾಯ ಮಾಡಿಕೊಳ್ಳಬೇಕು. ಇದರಲ್ಲಿ ಅರ್ಧ ಲೋಟವನ್ನು ಊಟಕ್ಕೆ ಮೊದಲು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇನ್ನುಳಿದ ಅರ್ಧ ಭಾಗವನ್ನು ರಾತ್ರಿ ಊಟಕ್ಕೆ  ಮೊದಲು, ಸ್ವಲ್ಪ ಬಿಸಿ ಮಾಡಿ ಕುಡಿಯಬೇಕು. ಹೀಗೆ ಬೆಳಿಗ್ಗೆ ಮತ್ತು ರಾತ್ರಿ ಈ ಅಮೃತಾದಿ ಕಷಾಯವನ್ನು ತೆಗೆದುಕೊಳ್ಳುತ್ತ ಆಹಾರದಲ್ಲಿ ಪಥ್ಯ, ವ್ಯಾಯಾಮಾದಿ ನಿಯಮಗಳನ್ನು ವಿಧಿಯಂತೆ ಪಾಲಿಸಿದರೆ, ರಕ್ತ ಮತ್ತು ಮೂತ್ರದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿ, ಮಧುಮೇಹ ಬಹಳ ಶೀಘ್ರವಾಗಿ ನಿಯಂತ್ರಣಕ್ಕೆ ಬರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ದುಬಾರಿ ಔಷಧಿಗಳಿಗಿಂತ, ಇದು ಒಂದು ಉತ್ತಮ ಹಾಗೂ ಸುಲಭ ಔಷಧಿ. -ಡಾ.ಅಬ್ದುಲ್ ಖಾದರ್,  ಆಯುರ್ವೇದ ತಜ್ಞ ಮೊ.ನಂ.9845199790

ಮಧುಮೇಹ ರೋಗವನ್ನು ಬಹಳ ಸುಲಭವಾಗಿ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾದ ಒಂದು ಉತ್ತಮ ಔಷಧ- ಅಮೃತಬಳ್ಳಿಯ ಕಷಾಯ, ಅಮೃತಬಳ್ಳಿ, ನೇರಳೆ ಚಕ್ಕೆ, ನೆಲ್ಲಿ ಚಟ್ಟು, ಸೊಗಡೆ ಬೇರು ಮತ್ತು ಜ್ಯೇಷ್ಠ ಮಧು ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಒಣಗಿಸಿ ದಪ್ಪ ಪುಡಿ ಮಾಡಿ ಇಟ್ಟುಕೊಳ್ಳಬೇಕು.ಒಂದು ಚಮಚ ಪುಡಿಯನ್ನು ಎರಡು ಲೋಟ ನೀರಿನಲ್ಲಿ ಹಾಕಿ, ಚೆನ್ನಾಗಿ ಕುದಿಸಿ, ಹಿಂಗಿಸಿ ಒಂದು ಲೋಟ ನೀರು ಉಳಿಯುವಂತೆ ಕಷಾಯ ಮಾಡಿಕೊಳ್ಳಬೇಕು. ಇದರಲ್ಲಿ ಅರ್ಧ ಲೋಟವನ್ನು ಊಟಕ್ಕೆ ಮೊದಲು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇನ್ನುಳಿದ ಅರ್ಧ ಭಾಗವನ್ನು ರಾತ್ರಿ ಊಟಕ್ಕೆ ಮೊದಲು, ಸ್ವಲ್ಪ ಬಿಸಿ ಮಾಡಿ ಕುಡಿಯಬೇಕು. ಹೀಗೆ ಬೆಳಿಗ್ಗೆ ಮತ್ತು ರಾತ್ರಿ ಈ ಅಮೃತಾದಿ ಕಷಾಯವನ್ನು ತೆಗೆದುಕೊಳ್ಳುತ್ತ ಆಹಾರದಲ್ಲಿ ಪಥ್ಯ, ವ್ಯಾಯಾಮಾದಿ ನಿಯಮಗಳನ್ನು ವಿಧಿಯಂತೆ ಪಾಲಿಸಿದರೆ, ರಕ್ತ ಮತ್ತು ಮೂತ್ರದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿ, ಮಧುಮೇಹ ಬಹಳ ಶೀಘ್ರವಾಗಿ ನಿಯಂತ್ರಣಕ್ಕೆ ಬರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ದುಬಾರಿ ಔಷಧಿಗಳಿಗಿಂತ, ಇದು ಒಂದು ಉತ್ತಮ ಹಾಗೂ ಸುಲಭ ಔಷಧಿ.
                                                                                                                                                                                -ಡಾ.ಅಬ್ದುಲ್ ಖಾದರ್, ಆಯುರ್ವೇದ ತಜ್ಞಮೊ.ನಂ.9845199790
Facebook Comments

Sri Raghav

Admin