ಇದು ಊಹಿಸಲಾಗದ ಘಟನೆ..! ದರೋಡೆ ಮಾಡಿದ ಗಿಡುಗ, ನೆರವು ನೀಡಿದ ಹೃದಯವಂತ

ಈ ಸುದ್ದಿಯನ್ನು ಶೇರ್ ಮಾಡಿ

Eagle--01

ಶಹಜಾನ್‍ಪುರ್, ಮಾ.4-ತಾನು ಬೆವರು ಹರಿಸಿ ಸಂಪಾದಿಸಿ ಕೂಡಿಟ್ಟಿದ್ದ ಹಣ ಗಿಡುಗನ ಪಾಲಾಗಿದ್ದರಿಂದ ನೊಂದ ದಿನಗೂಲಿ ಮಹಿಳೆಯೊಬ್ಬಳಿಗೆ 13,000 ಕಿ.ಮೀ.ದೂರದಲ್ಲಿರುವ ವ್ಯಕ್ತಿಯೊಬ್ಬರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಉತ್ತರಪ್ರದೇಶದ ಶಹಜಹಾನ್‍ಪುರದಲ್ಲಿ ಫೆ.23ರಂದು ಊಹಿಸಲಾಗದ ಘಟನೆಯೊಂದು ನಡೆಯಿತು. ನೂರ್‍ಜಹಾನ್ ಎಂಬ ಮಹಿಳೆ ಮಾರ್ಚ್ 5ರಂದು ತನ್ನ ಮಗಳ ಮದುವೆಗಾಗಿ ಬ್ಯಾಂಕ್‍ನಲ್ಲಿ 20,000 ರೂ.ಗಳ ಹಣ ಸಂಗ್ರಹಿಸಿದ್ದಳು. ಅದನ್ನು ಆಕೆ ವಿತ್‍ಡ್ರಾ ಮಾಡಿಕೊಂಡು ಬಾಂಕ್‍ನಿಂದ ಹೊರಬರುತ್ತಿದ್ದಂತೆ ಹೊಂಚು ಹಾಕುತ್ತಿದ್ದ ಗಿಡುಗ (ಹದ್ದು) ಆಕೆಯ ಬ್ಯಾಗ್ ಕಿತ್ತುಕೊಂಡು ಹಾರಿತು. ತನ್ನ ಜೀವಮಾನದ ಗಳಿಕೆ ಗಿಡುಗನ ಪಾಲಾಗಿದ್ದರಿಂದ ನೂರ್ ಚಿಂತಾಕ್ರಾಂತಳಾಗಿದ್ದಳು.

ಈ ಸುದ್ದಿ ಅಮೆರಿಕದ ಟೆಕ್ಸಾಸ್‍ನಲ್ಲಿರುವ ಉಸ್ಮಾನ್ ಖಾನ್ ಎಂಬ ವ್ಯಕ್ತಿಗೆ ತಿಳಿಯಿತು. ಈತ ಅಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್. ತಕ್ಷಣ ಆತ ಉತ್ತರಪ್ರದೇಶ ಪೊಲೀಸರನ್ನು ಸಂಪರ್ಕಿಸಿ ಆಕೆಯ ವಿಳಾಸಕ್ಕೆ 500 ಡಾಲರ್ (33,000 ರೂ.ಗಳು) ರವಾನಿಸಿದ. ಗಿಡುಗನ ಕೃತ್ಯದಿಂದ ನಿಂತು ಹೋಗಬೇಕಿದ್ದ ಮದುವೆ ನೆರವೇರಲು ಹೃದಯವಂತ ನೆರವು ನೀಡಿದ. ನಿಗದಿಯಂತ್ ನೂರ್ ಮಗಳ ವಿವಾಹ ನಾಳೆ ನಡೆಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin