ಉಡುಪುಗಳ ವಿನ್ಯಾಸದ ಬಗ್ಗೆ ಆಸಕ್ತಿಇದೆಯೇ

ಈ ಸುದ್ದಿಯನ್ನು ಶೇರ್ ಮಾಡಿ
Anirutha
 ⁠⁠⁠
ವಸ್ತ್ರ ವಿನ್ಯಾಸಕಿ ಈ ವೈದ್ಯೆ ಕಾಲಕ್ಕೆ ಅನುಗುಣವಾಗಿ ಜನರ ಅಭಿರುಚಿಗಳು ಕ್ರಮೇಣ ಬದಲಾವಣೆ ಹೊಂದುತ್ತಿರುತ್ತದೆ. ಅದರಲ್ಲಿ ಆಹಾರ ಪದ್ದತಿ, ಜೀವನ ಶೈಲಿ , ಸಾಮಾಜಿಕ ಬಾಂಧವ್ಯ ಹೀಗೆ ಹತ್ತು ಹಲವು ವಿಷಯಗಳು ಕಾಲಘಟ್ಟದಲ್ಲಿ ಪ್ರಮುಖವಾಗಿ ವ್ಯತ್ಯಾಸವಾಗುತ್ತ ಸಾಗುತ್ತವೆ. ದಿನನಿತ್ಯದ ಉಡುಪಿನ ಶೈಲಿಯಲ್ಲೂ ಅಷ್ಟೇ ಪರಿಣಾಮಕಾರಿಯಾದ ಮಾರ್ಪಾಡುಗಳಾಗುತ್ತದೆ. ವಿಶೇಷವಾಗಿ ಈ ಬದಲಾವಣೆ ಯುವಕ ಯುವತಿಯರ ಉಡುಪುಗಳಲ್ಲಿ ಕಾಣಿಸುತ್ತದೆ . ಇಂದಿನ ಯುವ ಪೀಳಿಗೆ ಸಿದ್ದ ಉಡುಪುಗಳ ಜೊತೆಗೆ ವಿನ್ಯಾಸ ಭರಿತ ಆಕರ್ಷಕ ವಸ್ತ್ರಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದು , ನಗರ ಹಾಗೂ ಪಟ್ಟಣ ವಾಸಿಗಳಲ್ಲಿ ನೂತನ ವಿನ್ಯಾಸದ ಉಡುಪು ಧರಿಸುವುದು ಇತ್ತೀಚಿನ ಟ್ರೆಂಡ್.
 ಟ್ರೆಂಡ್ ತಕ್ಕಂತೆ ಸಾಕಷ್ಟು ಮಂದಿ ಫ್ಯಾಷನ್ ವಿನ್ಯಾಸಕರು ತಮ್ಮ ಆಕರ್ಷಕ ವಿನ್ಯಾಸದ ಉಡುಪುಗಳಿಂದ ಗ್ರಾಹಕರನ್ನು ಸೆಳೆಯಲು ಇನ್ನಷ್ಟು ನವನವೀನ ವಿನ್ಯಾಸವನ್ನು ಫ್ಯಾಷನ್ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಅದರಲ್ಲಿ ಫ್ಯಾಷನ್ ಐಕಾನ್ ಎನಿಸಿರುವ ಬೆಂಗಳೂರಿನ ವಸ್ತ್ರ ವಿನ್ಯಾಸಕರಾದ ಅನಿರುತಾ ಸುಧೀರ್ ಕೂಡ ಒಬ್ಬರು. ಅನಿರುತಾ ಅವರು ಮೂಲತಃ ದಂತ ವೈದ್ಯರಾಗಿದ್ದು, ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಬಿಡುವಿನ ಸಮಯದಲ್ಲಿ ತಮ್ಮ ಹವ್ಯಾಸವಾಗಿದ್ದ ಉಡುಪುಗಳ ವಿನ್ಯಾಸವನ್ನು ಮುಂದೆ ಕಾಯಕವನ್ನಾಗಿ ಮಾಡಿಕೊಂಡು ಫ್ಯಾಷನ್ ಲೋಕದಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ದಿ ಕ್ಯಾಟಲಾಗ್ ಎಂಬ ಸಿದ್ಧ ಉಡುಪುಗಳ ಮಳಿಗೆಯ ಮೂಲಕ ಫ್ಯಾಶನ್ ಡಿಸೈನ್ ಕ್ಷೇತ್ರದ ಬಗ್ಗೆ ಅವರಿಗಿರುವ ಅಪಾರ ಆಸಕ್ತಿ, ಕಾಳಜಿ, ಅಕ್ಕರೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅನಿರುತಾ ಸುಧೀರ್ ವಸ್ತ್ರ ವಿನ್ಯಾಸದ ಬಗ್ಗೆ ಯಾವುದೇ ತರಬೇತಿ ಪಡೆದಿಲ್ಲವಾದರೂ ತನ್ನ ಶಾಲಾ ದಿನಗಳಿಂದಲೇ ಫ್ಯಾಷನ್ ಡಿಸೈನಿಂಗ್‍ನಲ್ಲಿ ಅಪಾರ ಆಸಕ್ತಿ ಬೆಳಸಿಕೊಂಡಿದ್ದರು.
Arunitha
ಮನೆಯಲ್ಲೇ ಕುಳಿತು ಉಡುಪುಗಳು ಹಾಗೂ ಬೊಂಬೆಗಳನ್ನು ವಿನೂತನ ರೀತಿಯಲ್ಲಿ ವಿನ್ಯಾಸ ಮಾಡುತ್ತಿದ್ದರು. ಸ್ವತಃ ಅವರೇ ವಿನ್ಯಾಸಗೊಳಿಸಿದ ಹೊಸ ಮಾದರಿಯ ಬಟ್ಟೆಗಳನ್ನು ಧರಿಸಿ ಸಮಾರಂಭಗಳಲ್ಲಿ ಪಾಲ್ಗೊಂಡಾಗ ಅವರ ಉಡುಪಿನ ಬಗ್ಗೆಯೇ ಪ್ರಶಂಸೆ ವ್ಯಕ್ತವಾಗುತ್ತಿತ್ತು. ಇವರ ವಸ್ತ್ರ ವಿನ್ಯಾಸಕ್ಕೆ ಮಾರುಹೋದವರು ತಮಗೂ ಈ ಮಾದರಿಯ ವಿನ್ಯಾಸ ಮಾಡಿಕೊಡುವಂತೆ ದುಂಬಾಲು ಬೀಳುತ್ತಿದ್ದರು. ಮತ್ತೆ ಮತ್ತೆ ತಾವೂ ಹೋದ ಕಡೆಯಲೆಲ್ಲಾ ವಸ್ತ್ರಗಳಿಗೆ ಬೇಡಿಕೆ ಬಂದಿದ್ದರಿಂದ ಪ್ರೇರಿತರಾದ ಅನಿರುತಾ ಫ್ಯಾಷನ್ ಜಗತ್ತಿಗೆ ಮುನ್ನುಡಿ ಬರೆದರು. ಅಂದಿನಿಂದ ಇಲ್ಲಿಯವರೆಗೆ ಸತತವಾಗಿ ಉಡುಪುಗಳ ವಿನ್ಯಾಸದಲ್ಲಿ ತೊಡಗಿಕೊಂಡು ವಿಶಿಷ್ಟ ವಿನ್ಯಾಸಗಾರರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಫ್ಯಾಷನ್‍ಗೆ ಯಾವುದೇ ಎಲ್ಲೆ ಇಲ್ಲ. ಅದೊಂದು ವಿಶಾಲವಾದ ಕ್ಷೇತ್ರ. ದಿನದಿಂದ ದಿನಕ್ಕೆ ಹೊಸ ಹೊಸ ವಿನ್ಯಾಸಗಳು ಸೇರ್ಪಡೆಯಾಗುತ್ತಿದ್ದರೂ ನೂತನವಾದುದ್ದಕ್ಕೆ ಎಂದಿಗೂ ಸ್ವಾಗತವಿರುತ್ತದೆ ಎಂಬುದು ಅನಿರುತಾ ಅವರ ಅಭಿಪ್ರಾಯ.
ನಾವು ತೊಡುವ ಉಡುಗೆಗಳಲ್ಲಿ ನಾನಾ ಬಗೆಯ ವಿನ್ಯಾಸ ಮಾಡಬಹುದೆನ್ನುವ ಇವರು ಆಧುನಿಕತೆಗೆ ತಕ್ಕಂತೆ ಮಹಿಳೆಯರ, ಪುರುಷರ ಹಾಗೂ ಮಕ್ಕಳ ಉಡುಪುಗಳ ಆಕರ್ಷಕ ವಿನ್ಯಾಸದಿಂದ ಎಂತಹ ಮೋಡಿ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಕೈ ಮಗ್ಗ ಸೇರಿದಂತೆ ಇನ್ನಿತರ ಎಲ್ಲ ಮಾದರಿಯ ಬಟ್ಟೆಗಳಿಗೂ ಅದಕ್ಕೆ ಸರಿ ಹೊಂದುವ ರೀತಿಯಲ್ಲಿ ತಮ್ಮ ಕೌಶಲ್ಯದಿಂದ ಗ್ರಾಹಕರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡುತ್ತಾರೆ. ಸೀರೆ ಸೆರಗಿನ ಅಂಚು, ಅದಕ್ಕೆ ಒಪ್ಪುವ ಬ್ಲೌಸ್‍ನ್ನು ಬಹಳ ವೈವಿಧ್ಯಮಯವಾಗಿ ವಿನ್ಯಾಸಗೊಳಿಸುವ ಮೂಲಕ ಮಹಿಳೆಯರಿಗೆ ಅಚ್ಚುಮೆಚ್ಚಾಗಿದ್ದಾರೆ. ಅನಿರುತಾ ಅವರ ವಿನ್ಯಾಸ ಭರಿತ ಸೀರೆಗಳನ್ನು ವಿವಾಹಿತ ಮಹಿಳೆಯರಷ್ಟೇ ಅಲ್ಲ, ಹದಿ ಹರಿಯದ ಹೆಣ್ಣು ಮಕ್ಕಳು ಕೂಡ ಇಷ್ಟಪಟ್ಟು ಉಟ್ಟುಕೊಳ್ಳುವಷ್ಟು ಮಟ್ಟಿಗೆ ಇವು ಆಕರ್ಷಿತವಾಗಿರುತ್ತವೆ. ಫ್ಯಾಷನ್ ಲೋಕದಲ್ಲಿ ಇವರು ವಿನ್ಯಾಸ ಮಾಡಿದ ಸೀರೆ, ಹುಡುಗಿಯರ ಡ್ರೆಸ್‍ಗಳಿಗೂ ಬಾರಿ ಬೇಡಿಕೆಯಿದೆ. ತಮ್ಮ ಆಕರ್ಷಕ ವಿನ್ಯಾಸದ ಉಡುಪುಗಳ ಮಾರಾಟಕ್ಕೆ ಬರೀ ಮಳಿಗೆಯೊಂದನ್ನೇ ನಂಬಿ ಕುಳಿತಿಲ್ಲ. ಬದಲಿಗೆ ಆನ್‍ಲೈನ್ ಮಾರಾಟ ವ್ಯವಸ್ಥೆ ಅಳವಡಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
the-cat
ಬೆಂಗಳೂರಿನಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಅನಿರುತಾ ಅವರು ತಮ್ಮ ವಿನ್ಯಾಸ ಭರಿತ ಬಟ್ಟೆಗಳೊಂದಿಗೆ ಹಾಜರಿರುತ್ತಾರೆ. ಈ ಹಿಂದೆ ಹೈದರಾಬಾದ್ ನಲ್ಲಿ ನಡೆದಿದ್ದ ಸಂಡೇ ಸೊಲ್ ಸಂತೆ ಹಾಗೂ ಈ ನಾಡು ವುಮೆನ್ಸ್ ಎಕ್ಸಪೋ ದಲ್ಲೂ ಭಾಗವಹಿಸಿ ರಾಷ್ಟ್ರೀಯ -ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ದೇಶ- ವಿದೇಶಗಳಲ್ಲೂ ದಿ ಕ್ಯಾಟಲಾಗ್ ಬ್ರಾಂಡ್‍ಗೆ ಗ್ರಾಹಕರನ್ನು ಹೊಂದಿರುವುದು ಇವರ ಹೆಗ್ಗಳಿಕೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ದಿ ಕ್ಯಾಟಲಾಗ್ ಶಾಖೆಗಳನ್ನು ಸ್ಥಾಪಿಸಿ ತಮ್ಮ ಫ್ಯಾಷನ್ ಉತ್ಪನ್ನಗಳನ್ನು ಪರಿಚಯಿಸಬೇಕು ಎಂಬ ಗುರಿ ಹೊಂದಿರುವ ಅನಿರುತಾ ಫ್ಯಾಷನ್ ಲೋಕದಲ್ಲಿ ಮಿಂಚಲು ಇವರಿಗೆ ಅವರ ಪತಿ ಹಾಗೂ ಕುಟುಂಬ ವರ್ಗ ನೀಡುತ್ತಿರುವ ಪ್ರೋತ್ಸಾಹ ಪ್ಲಸ್ ಪಾಯಿಂಟ್. ಅನಿರುತಾ ಅವರ  ಫ್ಯಾಷನ್    ಉಡುಪುಗಳಿಗಾಗಿ  designs.catalogue@gmail.com ಈ ಮೇಲ್ ಸಂಪರ್ಕಿಸಬಹುದು  ಹಾಗೂ  ಫೇಸ್ಬುಕ್ ನಲ್ಲಿ       https://www.facebook.com/DesignsCatalogue  ಈ ಲಿಂಕನ್ನು ಆಯ್ಕೆ   ಮಾಡಿದರೆ ನವನವೀನ  ವಿನ್ಯಾಸ ಭರಿತ ಸೀರೆಗಳು ಮತ್ತು ಡ್ರೆಸ್ ಗಳನ್ನೂ  ನೋಡಬಹುದು .
“ದಿ ಕ್ಯಾಟಲಾಗ್ ” ಸಂಗ್ರಹಣೆಗಳು ಬಹಳ ಅನನ್ಯ. ಪ್ರತಿಬಾರಿ ಇವರ ನೂತನ ವಿನ್ಯಾಸದ ಸಂಗ್ರಹಣೆಗಳ ಬಗ್ಗೆ ಭಾರೀ ನಿರೀಕ್ಷೆ  ಇಟ್ಟಿರುತ್ತೇನೆ .  ಇದು ನಂಬಲರ್ಹ ಶಾಪಿಂಗ್ ವೆಬ್‍ಸೈಟ್ ಆಗಿದ್ದು, ನಾನು ಇದರ ಒಂದು ಭಾಗವಾಗಿದ್ದೇನೆ ಎಂದು ಹೇಳಲು ಸಂತಸ ಪಡುತ್ತೇನೆ .
ಯಶಸ್ವಿನಿ .ಆರ್ (ಬೆಂಗಳೂರು).
ಸೀರೆಗಳ ಅಪರೂಪದ ಶೈಲಿ ,ಸಂಗ್ರಹಣೆ ,ಬಣ್ಣ ಹಾಗೂ ಸಮಂಜಸ ಬೆಲೆ ಬಗ್ಗೆ ನನಗೆ ಅಪಾರ ಮೆಚ್ಚುಗೆ ಇದೆ. ಇದರ ಅನನ್ಯ ಸಂಗ್ರಹಣೆಗಳು ಮತ್ತು ಸ್ವಾಗತಾರ್ಹ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.  ಅನುರಿತಾ ಅವರ ವಿನ್ಯಾಸ ನಿರೀಕ್ಷೆಗೂ ಮೀರಿದ ತೃಪ್ತಿ ನೀಡಿದೆ.
ಸಂಗೀತ ಅಕರಪು (ಲಂಡನ್,ಯುಕೆ)

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin