ಕಾಡ್ಗಿಚ್ಚಿನಿಂದ ಚಾಮುಂಡಿಬೆಟ್ಟ ರಕ್ಷಿಸಲು 40 ಅರಣ್ಯ ಸಿಬ್ಬಂದಿ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Chamundi-Hills--01

ಮೈಸೂರು, ಮಾ.4- ಮೈಸೂರಿನ ಚಾಮುಂಡಿಬೆಟ್ಟವನ್ನು ಕಾಡ್ಗಿಚ್ಚಿನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮವಾಗಿ ಹಗಲು-ರಾತ್ರಿ 40 ಅರಣ್ಯ ಸಿಬ್ಬಂದಿಗಳನ್ನು ಮೈಸೂರು ಅರಣ್ಯ ಇಲಾಖೆ ನೇಮಕ ಮಾಡಿದೆ.  ರಾಜ್ಯಾದ್ಯಂತ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ಝಳ ಖಡ್ಗದಂತೆ ಝಳಪಿಸುತ್ತಿದೆ. ರಾಜ್ಯದ ವಿವಿಧೆಡೆ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.  ಇವರು 24×7 ಸೇವೆಯ ಮೂಲಕ ಕಣ್ಗಾವಲಿಟ್ಟು ಅರಣ್ಯ ರಕ್ಷಣೆಗೆ ಮುಂದಾಗಿದ್ದಾರೆ. ಚಾಮುಂಡಿ ಬೆಟ್ಟದ ಪ್ರದೇಶದಲ್ಲಿ 17 ಚದರ ಕಿಲೋ ಮೀಟರ್ ವ್ಯಾಪ್ತಿಯ 615 ಹೆಕ್ಟೇರ್ ವಿಸ್ತೀರ್ಣವುಳ್ಳ ಅರಣ್ಯ ಸಂಪತ್ತು ಹೊಂದಿದೆ.

ಹೀಗಾಗಿ ಈ ಅರಣ್ಯ ಪ್ರದೇಶ ಚಿರತೆ, ತೋಳ ಸೇರಿದಂತೆ ಪ್ರಾಣಿ ಸಂಕುಲಗಳ ತಾಣವಾಗಿದೆ. ಒಂದು ವೇಳೆ ಅರಣ್ಯಕ್ಕೆ ಕಾಡ್ಗಿಚ್ಚು ಬಿದ್ದರೆ ಇಡೀ ಪ್ರಾಣಿಸಂಕುಲ ನಾಶವಾಗಿ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಭಸ್ಮವಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಬೆಟ್ಟದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಂಡಿದೆಯಲ್ಲದೆ ಈ ಪ್ರದೇಶದಲ್ಲಿ ಧೂಮಪಾನ ನಿಷೇಧಿಸಿದೆ. ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin