ಪಡಿತರ ಸರಳೀಕರಣ : ನ್ಯಾಯಬೆಲೆ ಅಂಗಡಿಯಲ್ಲೇ ಕೂಪನ್ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Ration--01

ಬೆಂಗಳೂರು,ಮಾ.4-ಪಡಿತರ ವಿತರಣೆಯ ನಿಯಮಗಳನ್ನು ಸರ್ಕಾರ ಸರಳೀಕರಣಗೊಳಿಸಿದ್ದು , ಪಡಿತರದಾರರು ಕೂಪನ್‍ಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲೇ ಪಡೆಯಬಹುದಾಗಿದೆ.
ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ತಮ್ಮ ಹೆಬ್ಬೆಟ್ಟು ಒತ್ತಿ ಪಡಿತರ ಕೂಪನ್‍ಗಳನ್ನು ಪಡೆದು ಪಡಿತರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.  ಪಡಿತರ ಸೇವಾ ಸೌಲಭ್ಯಗಳು ಈಗ ಬೆರಳ ತುದಿಯಲ್ಲೇ ಸಿಗಲಿವೆ. ನಿಮ್ಮ ಮೊಬೈಲ್ ಫೋನ್‍ನಲ್ಲೇ ಎಲ್ಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಅನ್ನ ಭಾಗ್ಯ ಯೋಜನೆ ಸೇವೆಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಹೊಸ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ.

ಪಡಿತರ ಪದಾರ್ಥಗಳ ನಿರಾಕರಣೆಯ ಬಗ್ಗೆ ಮೊಬೈಲ್‍ನಲ್ಲಿ ದೂರು ದಾಖಲಿಸಬಹುದು. ವಿಳಾಸ ಬದಲಾದರೆ ನ್ಯಾಯಬೆಲೆ ಅಂಗಡಿ ಬದಲಾವಣೆ ಬಗ್ಗೆ ಪಡಿತರ ಚೀಟಿಯಲ್ಲಿ ಸದಸ್ಯರ ಹೆಸರು ತೆಗೆದು ಹಾಕುವುದು, ಹೊಸ ಸದಸ್ಯರನ್ನು ಸೇರ್ಪಡೆ ಮಾಡಬಹುದಾಗಿದೆ.   ಬಿಪಿಎಲ್‍ನಿಂದ ಎಪಿಎಲ್‍ಗೆ ಅಥವಾ ಸೀಮೆಎಣ್ಣೆಯಿಂದ ಸೀಮೆಎಣ್ಣೆ ರಹಿತ ಪಡಿತರ ಚೀಟಿಗಳನ್ನು ಮೇಲ್ದರ್ಜೆಗೆ ಬದಲಾಯಿಸಬಹುದು. ಈ ಎಲ್ಲ ಸೌಲಭ್ಯಗಳನ್ನು ಪಡೆಯಲು ಯಾವುದೇ ಸೇವಾ ಕೇಂದ್ರಗಳಿಗೆ ಹೋಗುವ ಅವಶ್ಯಕತೆಯಿಲ್ಲ. ನಿಮ್ಮ ಮೊಬೈಲ್ ಫೋನ್ ಮೂಲಕವೇ ಸೇವೆಗಳನ್ನು ಪಡೆಯಬಹುದಾಗಿದ್ದು, ಸಹಾಯವಾಣಿ ಸಂಖ್ಯೆ 1967ರಲ್ಲಿ ಸಂಪರ್ಕಿಸಬಹುದು.   ವೆಬ್‍ಸೈಟ್: www.ahara.kar.nic.in ನಲ್ಲಿ ಮಾಹಿತಿ ಪಡೆಯಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin