ಮಕ್ಕಳ ಪ್ರಗತಿಗೆ ಶಿಕ್ಷಕರು, ಪಾಲಕರು, ಶಿಕ್ಷಣ ಮಂತ್ರವಾಗಲಿ

ಈ ಸುದ್ದಿಯನ್ನು ಶೇರ್ ಮಾಡಿ

14

ಯಲಬುರ್ಗಾ,ಮಾ.3- ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣದ ಹಕ್ಕು ಕಡ್ಡಾಯವಾಗಿದೆ. ಮಕ್ಕಳ ಪಗ್ರತಿಯ ಅಭಿವೃದ್ದಿಗೆ ಶಿಕ್ಷಕರು ಮತ್ತು ಪಾಲಕರು ಶಿಕ್ಷಣವನ್ನು ಮಂತ್ರವಾಗಿ ಜಪಿಸಬೇಕು ಎಂದು ಹಿರಿಯ ಸಾಹಿತಿ ಎ.ಎಂ. ಮದರಿ ಹೇಳಿದರು. ಪಟ್ಟಣದ ಎಸ್.ಎ. ನಿಂಗೋಜಿ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ 4ನೇ ವರ್ಷದ ಶಾಲಾ ವಾರ್ಷಿಕೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಮೌಲ್ಯಾಧಾರಿತ ನೈತಿಕತೆಯ ವೈಚಾರಿಕ ಶಿಕ್ಷಣ ನೀಡುತ್ತಿರುವುದು ಸಮಾಜದಲ್ಲಿ ಆರೋಗ್ಯಕರವಾದ ವಾತವರಣ ನಿರ್ಮಾಣವಾಗಿದೆ. ಪಾಲಕರು ತಮ್ಮ ಮಗುವಿನ ಜೊತೆ ಮನೆಯ ಸಂಸ್ಕೃತಿ  ವಿಚಾರವನ್ನು ಕಲಿಸುವ ಜವಾಬ್ದಾರಿ ಬೆಳಸಿಕೊಳ್ಳಬೇಕು ಎಂದರು.

ಕೊಪ್ಪಳದ ಕಾನೂನು ವಿದ್ಯಾಲಯದ ಪ್ರಾಚಾರ್ಯ ಬಸವರಾಜ ಹನಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿದ್ಯೆ ಕಲಿತಾಗ ಮಾತ್ರ ಆದರ್ಶ ವ್ಯಕ್ತಿಗಳಾಗಿ ಸಮಾಜದಲ್ಲಿ ನಿರ್ಮಾಣವಾಗಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಕಿರಿಯ ಶ್ರೇಣಿಯ ನ್ಯಾಯಾಧೀಶ ಈಶ್ವರ ಎಸ್. ಮುಸಲ್ಮಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಪಿಎಂಸಿ ಸದಸ್ಯ ಬಸವರಾಜ ಗಡಾದ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಸಿ.ಆರ್.ಪಿ ದಾವಲಸಾಬ ಮದರಿ, ಪ್ರಾಚಾರ್ಯ ರವಿ ನಿಂಗೋಜಿ, ಮುಖ್ಯ ಶಿಕ್ಷಕಿ ಎ.ಎ. ಕನ್ವಡಕರ್, ಶಿಕ್ಷಕ ಶಿವರಾಜ ಕುಂಬಾರ, ಡಿ.ಬಿ. ದೇಸಾಯಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin