ಹು-ಧಾ ಪಾಲಿಕೆಯಲ್ಲಿ ಮತ್ತೆ ಅರಳಿದ ಕಮಲ : ಡಿ.ಕೆ.ಚವ್ಹಾಣ ಮೇಯರ್, ಲಕ್ಮೀಬಾಯಿ ಬಿಜವಾಡ ಉಪಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

Hubli-Dharwad--01

ಹುಬ್ಬಳ್ಳಿ,ಮಾ.4- ನೂತನ ಮಹಾಪೌರರಾಗಿ ಬಿಜೆಪಿಯ ಡಿ.ಕೆ. ಚವ್ಹಾಣ ಮತ್ತು ಉಪಮಹಾಪೌರರಾಗಿ ಲಕ್ಮೀಬಾಯಿ ಬಿಜವಾಡ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಹು-ಧಾ ಮಹಾನಗರಪಾಲಿಕೆಯಲ್ಲಿ ಕಮಲ ಅರಳಿದೆ. ಕಾಂಗ್ರೆಸ್‍ನ ಮೇಯರ್ ಸ್ಥಾನದ ಆಕಾಂಕ್ಷಿ ದಶರಥ ಎಂ. ವಾಲಿ ಉಪಮೇಯರ್ ಸ್ಥಾನದ ಆಕಾಂಕ್ಷಿ ಸುವರ್ಣ ಕಲ್ಲಕುಂಟ್ಲೆ ಪರಾಭವ ಹೊಂದಿದರು. ತಮ್ಮ ಪಕ್ಷವನ್ನು ಪಾಲಿಕೆಯಲ್ಲಿ ಪ್ರತಿಷ್ಠಾಪಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಂತ್ರ ಕೊನೆಗೂ ಫಲಿಸದೆ ಕೈಕೊಟ್ಟಿದೆ.  ಇಂದು ಪಾಲಿಕೆಯ ನೂತನ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ ಕೈ ಎತ್ತುವ ಮೂಲಕ ಬಿಜೆಪಿಯ ಡಿ.ಕೆ. ಚವ್ಹಾಣ 41 ಹಾಗೂ ಕಾಂಗ್ರೆಸ್‍ನ ದಶರಥ ಎಂ. ವಾಲಿ 33 ಮತಗಳನ್ನು ಪಡೆದರು. ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಲಕ್ಷ್ಮೀ ಬಿಜವಾಡ 41 ಹಾಗೂ ಕಾಂಗ್ರೆಸ್‍ನ ಸುವರ್ಣ ಕಲ್ಲಕುಂಟ್ಲೆ ಅವರು 33 ಮತಗಳನ್ನು ಪಡೆದರು.

ಮೇಯರ್ ಸ್ಥಾನಕ್ಕೆ ಪಾಲಿಕೆ 53ನೇ ವಾರ್ಡಿನ ಬಿಜೆಪಿು ಸದಸ್ಯ ಡಿ.ಕೆ. ಚವ್ಹಾಣ ಹಾಗೂ 61ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ದಶರಥ ಎಂ. ವಾಲಿ ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ 50ನೇ ವಾರ್ಡ್ ಸದಸ್ಯೆ ಬಿಜೆಪಿಯ ಲಕ್ಷ್ಮೀಬಾಯಿ ಬಿಜವಾಡ ಹಾಗೂ 48ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲ ನಾಮಪತ್ರ ಸಲ್ಲಿಸಿದ್ದರು.  ಒಂದು ಗಂಟೆಗೆ ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಪಾಲಿಕೆಯ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಪ್ರಾದೇಶಿಕ ಆಯುಕ್ತ ಎನ್. ಜಯರಾಂ ಆಯ್ಕೆಯನ್ನು ಘೋಷಿಸಿದರು.  ಈ ವೇಳೆ ವಿಧಾನ ಸಭೈ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ವಿಪ ಸದಸ್ಯ ಪ್ರದೀಪ ಶೆಟ್ಟರ್ ಮುಂತಾದವರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin