ಎರಡು ಕಡೆ ಅಡುಗೆ ಅನಿಲ ಸೋರಿಕೆ, ತಂದೆಮಗನಿಗೆ ಗಾಯ, 3 ಮನೆ ಜಖಂ

ಈ ಸುದ್ದಿಯನ್ನು ಶೇರ್ ಮಾಡಿ

Bengaluur---02

ಬೆಂಗಳೂರು, ಮಾ.5– ಅನಿಲ ಸೋರಿ ಉಂಟಾದ ಬೆಂಕಿ ಅನಾಹುತದಲ್ಲಿ ತಂದೆಮಗ ಗಾಯಗೊಂಡಿರುವ ಘಟನೆ ಯಲಹಂಕ ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸ್ ಕ್ವಾಟ್ರ್ರಸ್ ಬಳಿಯ ನಾಗಾರ್ಜುನ ಅಪಾರ್ಟ್‍ಮೆಂಟ್ ನಿವಾಸಿ ಕೃಷ್ಣಾನಂದ್(78) ಮತ್ತು ಅನಂತರಾಮ್(37) ಗಾಯಗೊಂಡಿರುವ ತಂದೆ, ಮಗ.  ಎರಡನೇ ಮಹಡಿಯ ಮನೆಯಲ್ಲಿ ತಂದೆ ಮಗ ವಾಸವಾಗಿದ್ದಾರೆ. ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಕೃಷ್ಣಾನಂದ್ ಅವರು ಮೂತ್ರ ವಿಸರ್ಜನೆಗೆ ಹೋಗಲು ಎದ್ದು ಲೈಟ್ ಹಾಕಿದ್ದಾರೆ. ಅನಿಲ ಸೋರಿಕೆಯಿಂದಾಗಿ ಲೈಟ್ ಹಾಕುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ತಂದೆ ಮಗ ಗಾಯಗೊಂಡಿದ್ದಾರೆ.   ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಲಿಂಡರ್ ಸ್ಫೋಟ , 3 ಮನೆ ಜಖಂ : 

ದೊಡ್ಡಬಳ್ಳಾಪುರ, ಮಾ.5- ಸಿಲಿಂಡರ್ ಸ್ಫೋಟಗೊಂಡು ಮೂರು ಮನೆಗಳು ಜಖಂಗೊಂಡಿರುವ ಘಟನೆ ತಾಲ್ಲೂಕಿನ ಚಿಕ್ಕಬೆಳವಂಗಲದಲ್ಲಿ ನಡೆದಿದೆ. ನಾಗರತ್ನಮ್ಮ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಅಕ್ಕ-ಪಕ್ಕದ ಮನೆಗಳು ಹಾನಿಗೊಂಡಿವೆ. ಈ ವೇಳೆ ನಾಗರತ್ನಮ್ಮ ಇವರ ಅಕ್ಕಪಕ್ಕದ ಮನೆಯವರು ಮನೆಯಿಂದ ಹೊರಗೆ ಓಡಿ ಹೋಗಿದ್ದರಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ.  ಸ್ಫೋಟದ ತೀವ್ರತೆಗೆ ಮನೆಗಳ ಛಾವಣಿ ಕುಸಿದು ಮನೆಯೊಳಗಿದ್ದ ವಸ್ತುಗಳು ಹಾಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin