ಖಿನ್ನತೆಗೊಳ್ಳಗಾಗಿದ್ದ ಪಿಎಸ್‍ಐ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Suicide-01

ಕೊಪ್ಪಳ ,ಮಾ.5 -ಮಗನ ಸಾವಿನಿಂದ ಖಿನ್ನತೆಗೊಳಗಾಗಿದ್ದ ಪಿಎಸ್‍ಐ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪೊಲೀಸ್ ಕ್ವಾಟ್ರ್ರಸ್ ನಿವಾಸಿ ಶಶಿಧರ್(59) ಆತ್ಮಹತ್ಯೆ ಮಾಡಿಕೊಂಡ ಪಿಎಸ್‍ಐ. ಎಂಬಿಬಿಎಸ್ ಓದುತ್ತಿದ್ದ ಮಗ ಅಜಯ್‍ಕುಮಾರ್ 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಂದಿನಿಂದಲೂ ಖಿನ್ನತೆಗೊಳ್ಳಗಾಗಿದ್ದರು ಎಂದು ತಿಳಿದುಬಂದಿದೆ.
ಅಲ್ಲದೆ ಶಶಿಧರ್ ಅವರು ಗಂಟಲು ಕ್ಯಾನ್ಸರ್‍ನಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.   ಇದರಿಂದ ಮನನೊಂದಿದ್ದ ಶಶಿಧರ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin