ಬೈಕ್ ವೀಲಿಂಗ್ ಮಾಡುವ ಮುನ್ನ ಅಪ್ಪ ಅಮ್ಮನ ಬಗ್ಗೆ ಒಮ್ಮೆ ಯೋಚಿಸಿ : ನಟ ಯಶ್ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Bike-Wheeling--01

ಮಹದೇವಪುರ, ಮಾ.5-ಡೀಸೆಂಟ್ಟಾಗಿರೋವಾಗ ಪ್ರೀತ್ಸೋ ಹುಡ್ಗಿ ಲೈಫ್‍ಲಾಂಗ್ ಇರ್ತಾಳೆ, ಬೈಕ್ ವೀಲಿಂಗ್‍ಗೆ ಬೀಳೋ ಹುಡ್ಗಿ ಕೈಕೊಡ್ತಾಳೆ ಹುಷಾರ್ ಎಂದು ಚಲಚನಚಿತ್ರ ನಟ ಯಶ್ ಇಂದಿಲ್ಲಿ ತಿಳಿಸಿದರು. ಹೈದರಾಬಾದ್ ಮೂಲದ ಶ್ರೀಹರ್ಷ ಫೌಂಡೇಷನ್ ವತಿಯಿಂದ ವೈಟ್‍ಫೀಲ್ಡ್ ಬಳಿ ಇರುವ ವೈದೇಹಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ವೇಗದ ಚಾಲನೆ ಕುರಿತು ಅರಿವಿನ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ಯುವಕರ ಜೀವನ ತಂದೆ-ತಾಯಿಗಳ ಜೀವನವಿದ್ದಂತೆ, ಬೈಕ್ ವೀಲಿಂಗ್ ಮಾಡಿ ಅನಾಹುತ ಮಾಡಿಕೊಳ್ಳುವ ಮೊದಲು ತಂದೆ-ತಾಯಿಯ ಬಗ್ಗೆ ಯೋಚಿಸಿ ಎಂದಿಗೂ ಬೈಕ್ ವೀಲ್ ಮಾಡುವುದಿಲ್ಲ ಎಂದು ಹೇಳಿದರು. ಬೈಕ್ ವೀಲಿಂಗ್ ಮಾಡಿದಾಕ್ಷಣ ಈ ಇಂಪ್ರೆಸ್‍ಗೆ ಹೆಚ್ಚಾಗಿ ಹುಡುಗಿಯರು ಬೀಳುತ್ತಾರೆ, ಹುಡುಗಿಯರೇ ಹುಡುಗನ ಮನಸ್ಸು ನೋಡಿ ಅವನ ಇಂಪ್ರೆಸ್ ಅಲ್ಲ ಎಂದು ಕಿವಿ ಮಾತು ಹೇಳಿದರು.

ಟ್ರಾಫಿಕ್ ರೂಲ್ಸ್ ಪಾಲಿಸಿ, ನಿಯಮಗಳಿಗೆ ವಿರುದ್ಧವಾಗಿ ಹೋಗಬೇಡಿ, ತಂದೆ-ತಾಯಿಗೆ ಗೌರವ ನೀಡಿ ಲೈಫ್‍ನಲ್ಲಿ ಸಕ್ಸಸ್ ಆಗುತ್ತೀರ ಎಂದು ತಿಳಿಸಿದರು. ಹೆಲ್ಮೇಟ್ ಉಪಯೋಗಿಸದೆ ಬೈಕ್ ರೈಡ್ ಮಾಡಬೇಡಿ ಎಂದು ಹೇಳಿದರು.   ತೆಲುಗು ಚಿತ್ರ ನಟ ಅಖಿಲ್ ಮಾತನಾಡಿ, ತಂದೆ-ತಾಯಿಗಿಂತ ಮಿಗಿಲಾದವರು ಯಾರೂ ಇಲ್ಲ. ಲೈಫ್‍ನಲ್ಲಿ ಸಿಗೋದು ಒಂದೇ ಜೀವನ ಇಂತಹ ಜೀವನ ಒಳ್ಳೆಯದಕ್ಕೆ ಉಪಯೋಗಿಸಿ ಎಂದು ಹೇಳಿದರು.  ಆಂಧ್ರಪ್ರದೇಶದಲ್ಲಿ ಈ ರೀತಿಯ ವೇಗ ಚಾಲನೆಯ ಅರಿವು ಕಾರ್ಯಕ್ರಮ ಹೆಚ್ಚಾಗಿ ಹಮ್ಮಿಕೊಳ್ಳುತ್ತಿದ್ದು, ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡು ತಮ್ಮನ್ನು ಕರೆಸಿರುವುದಕ್ಕೆ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ನಟ ಸುನೀಲ್, ಫೌಂಡೇಷನ್‍ನ ಸಂಸ್ಥಾಪಕಿ ಹಿಮಬಿಂದು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ,ಸ್ಥಳೀಯರು ಉಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin