ಮಲಗಿದ್ದಾಗ ಮನೆಗೆ ಬೆಂಕಿ ಬಿದ್ದು ಮಹಿಳೆ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire-Girl-Suicide

ಮುಂಡರಗಿ,ಮಾ.5- ಎಲ್ಲರೂ ಮಲಗಿದ್ದಾಗ ತಡರಾತ್ರಿ ಮನೆಯೊಂದಕ್ಕೆ ಬೆಂಕಿ ಬಿದ್ದು ಮಹಿಳೆಯೊಬ್ಬಳು ಸಜೀವವಾಗಿ ಬೆಂದುಹೋದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಸಂಭವಿಸಿದೆ. ಬೆಂಕಿಯಲ್ಲಿ ಬೆಂದು ಹೋದ ಮಹಿಳೆಯನ್ನು 56 ವರ್ಷ ಉಡಚಮ್ಮ ಎಂದು ಗುರುತಿಸಲಾಗಿದ್ದು , ಉಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು , ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿದ್ದ 60 ಗ್ರಾಮ್‍ಗಳಿಗೂ ಹೆಚ್ಚು ಚಿನ್ನ , ಆಹಾರಧಾನ್ಯ, ಬಟ್ಟೆಬರೆಗಳು ಬೆಂಕಿಗೆ ಸುಟ್ಟು ಭಸ್ಮವಾಗಿವೆ.
ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದವರು ತಡವಾಗಿ ಬಂದರೆಂದು ಸ್ಥಳೀಯರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin