ಮೊಬೈಲ್‍ಗಳಲ್ಲಿ 3 ಹೊಸ ಮಾರಕ ಸೂಕ್ಷ್ಮಜೀವಿಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Bacteria-01

ಪುಣೆ, ಮಾ.5-ಮೊಬೈಲ್ ಹ್ಯಾಂಡ್‍ಸೆಟ್‍ಗಳಲ್ಲಿ ಆಶ್ರಯ ಪಡೆಯುವ ಮೂರು ಹೊಸ ಸೂಕ್ಷ್ಮ ಜೀವಿಗಳನ್ನು ಪುಣೆ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ರೋಗಕಾರಕ ಬ್ಯಾಕ್ಟೀರಿಯಾಗಳಿಗೆ ಶೌಚಾಲಯಕ್ಕಿಂತ ಮೊಬೈಲ್ ಫೋನ್‍ಗಳೇ ಹೆಚ್ಚು ಸುರಕ್ಷಿತ ವಾಸಸ್ಥಾನ ಎಂಬುದನ್ನು ಇದು ಸಾಬೀತು ಮಾಡುತ್ತದೆ.   ನಾವು ಬಳಸುವ ಮೊಬೈಲ್ ಫೋನ್‍ಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿರುವಾಗಲೇ, ಇವು ಮಾರಕ ಸೂಕ್ಷ್ಮಾಣುಗಳ ಆಶ್ರಯ ತಾಣ ಎಂಬುದನ್ನು ಪುಣೆಯ ಸರ್ಕಾರಿ ಒಡೆತನ ರಾಷ್ಟ್ರೀಯ ಕೋಶ ವಿಜ್ಞಾನ ಕೇಂದ್ರದ (ಎನ್‍ಸಿಸಿಎಸ್) ವಿಜ್ಞಾನಿಗಳು ದೃಢಪಡಿಸಿದ್ದಾರೆ. ಮೊಬೈಲ್ ಹ್ಯಾಂಡ್‍ಸೆಟ್‍ಗಳು ಟಾಯ್ಲೆಟ್ ಸೀಟ್‍ಗಳಿಗಿಂತಲೂ ಹೆಚ್ಚು ಕೊಳಕು. ಇದರಲ್ಲಿ ಔಷಧ ಪ್ರತಿರೋಧಕ ಮಾರಕ ಬ್ಯಾಕ್ಟೀರಿಯಾ ಇರುತ್ತವೆ ಎಂಬುದನ್ನು ಪಾಶ್ಚಿಮಾತ್ಯ ದೇಶಗಳ ಸಂಶೋಧನೆಗಳು ಖಚಿತಪಡಿಸಿದ್ದವು. ಇದಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಪುಣೆ ವಿಜ್ಞಾನಿಗಳ ಸಂಶೋಧನೆ ಫಲಿತಾಂಶ ನೀಡಿದೆ.

ಮೊಬೈಲ್ ಫೋನ್‍ಗಳ ಪರದೆ ಮೇಲೆಯೇ ಮೂರು ಹೊಸ ಸೂಕ್ಷ್ಮಾಣುಗಳು ಇರುವುದನ್ನು ನಾವು ಪತ್ತೆ ಮಾಡಿದ್ದೇವೆ. ಇವುಗಳಲ್ಲಿ ಎರಡು ಬ್ಯಾಕ್ಟೀರಿಯಾ ಮತ್ತು ಒಂದು ಫಂಗಸ್ (ಶಿಲಿಂಧ್ರ) ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈವರೆಗೂ ನಡೆದ ಸಂಶೋಧನೆಯಲ್ಲಿ ಈ ಸೂಕ್ಷ್ಮಾಣುಗಳು ಪತ್ತೆಯಾಗಿರಲಿಲ್ಲ.   ಶೌಚಾಲಯ ಆಸನಗಳಲ್ಲಿ ಸಾಮಾನ್ಯವಾಗಿ ಮೂರು ರೀತಿಯ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಆದರೆ ಮೊಬೈಲ್ ಫೋನ್‍ಗಳಲ್ಲಿ 12 ವಿಧದ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳು ಇರುತ್ತವೆ ಎಂದು 2015ರಲ್ಲಿ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಣು ಸೂಕ್ಷ್ಮಜೀವಶಾಸ್ತ್ರ ಮತ್ತು ರೋಗ ಪ್ರತಿರೋಧಕ ಇಲಾಖೆಯ ಸಹಾಯಕ ಫೋಫೆಸರ್ ಡಾ. ವಿಲಿಯಂ ಡಿಪಾಲೋ ಸಂಶೋಧನೆ ಮೂಲಕ ಪತ್ತೆ ಮಾಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin